ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಗಳಿಗಾಗಿ ಕಳೆದೆರಡು ವರ್ಷಗಳಲ್ಲಿ ಐಸಿಐಸಿಐ ಬ್ಯಾಂಕಿಗೆ ಎರಡು ಬಾರಿ ಎಚ್ಚರಿಕೆ ಅಥವಾ ಸಲಹಾ ಟಿಪ್ಪಣಿ ನೀಡಲಾಗಿತ್ತು ಎಂದು ಶುಕ್ರವಾರ ಲೋಕಸಭೆಗೆ ವಿತ್ತ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
2007-08ರ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್‌ನ ಪಾಟ್ನಾ ಶಾಖೆಯಲ್ಲಿ ನಕಲಿ ಖಾತೆಗಳನ್ನು ಧಗಾಕೋರರು ತೆರೆದಿದ್ದ ಹಿನ್ನಲೆಯಲ್ಲಿ, ಐಸಿಐಸಿಐ ಬ್ಯಾಂಕ್ ಠೇವಣಿ ಖಾತೆಗಳನ್ನು ತೆರೆಯುವ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾವಳಿ/ನಿರ್ದೇಶನಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು.
ಇದಕ್ಕಾಗಿ ಬ್ಯಾಂಕಿಗೆ 2007ರ ಡಿಸೆಂಬರ್‌ನಲ್ಲಿ ಸಲಹಾ ಟಿಪ್ಪಣಿ ಮತ್ತು ಹಾಂಕಾಂಗ್‌ನ ವ್ಯವಹಾರಗಳಲ್ಲಿ ಸುರಕ್ಷತೆಯಿಲ್ಲದ ನಿಯಮಗಳಿಗೆ ಒಳಗಾಗಿದ್ದಕ್ಕಾಗಿ ನಿರ್ದೇಶನಗಳಿಗೆ ವಿರುದ್ಧವಾದ ವ್ಯವಹಾರಗಳನ್ನು ನಡೆಸಿರುವುದಕ್ಕಾಗಿ 2008ರ ಏಪ್ರಿಲ್‌ನಲ್ಲಿ ಎಚ್ಚರಿಕೆಯ ಪತ್ರಗಳನ್ನು ನೀಡಲಾಗಿತ್ತು ಎಂದು ಸಚಿವ ಮುಖರ್ಜಿಯವರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐಸಿಐಸಿಐ ಬ್ಯಾಂಕ್ ಜತೆಗೆ ಇತರ ಕೆಲವು ಬ್ಯಾಂಕುಗಳಿಗೂ ಇದೇ ರೀತಿಯ ಎಚ್ಚರಿಕಾ ಪತ್ರಗಳನ್ನು ನೀಡಲಾಗಿತ್ತು. ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್ ಮತ್ತು ಸೆಂಚುರಿಯನ್ ಬ್ಯಾಂಕ್ ಆಫ್ ಬರೋಡಾ ಲಿಮಿಟೆಡ್ ಕೂಡ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಲವು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೊಟೀಸ್ ನೀಡಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.
|