ನ್ಯೂಯಾರ್ಕ್ ಸಹಲೆಯ ಪ್ರಭಾವಕ್ಕೆ ತುತ್ತಾದ ಕೈಗಾರಿಕಾ ವಲಯ ಬೇಡಿಕೆ ಹೆಚ್ಚಿಸಿದ ಕಾರಣ ಚಿನಿವಾರ ಪೇಟೆಯಲ್ಲಿ ಬೆಳ್ಳಿ ದರವು ಪ್ರತೀ ಕಿಲೋವೊಂದಕ್ಕೆ 125 ರೂಪಾಯಿಗಳ ಏರಿಕೆ ದಾಖಲಿಸಿದೆ.
ಮಾರುಕಟ್ಟೆ ವೃದ್ಧಿಗೆ ಸಹಕಾರ ನಿರ್ಲಿಪ್ತವಾದ ಹಿನ್ನಲೆಯಲ್ಲಿ ಉತ್ಕೃಷ್ಟ ಚಿನ್ನ ಮತ್ತು ಶುದ್ಧ ಚಿನ್ನ ದರದಲ್ಲಿ ಮಹತ್ವದ ಬದಲಾವಣೆಯಾಗಿಲ್ಲ.
ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ ವಿತರಣೆಯ ಬೆಳ್ಳಿಯು 11 ಸೆಂಟ್ಸ್‌ಗಳ ಏರಿಕೆ ಕಂಡಿದ್ದು, ಪ್ರತೀ ಔನ್ಸ್ ಬೆಲೆ 13.88 ಡಾಲರುಗಳನ್ನು ದಾಖಲಿಸಿದೆ.
ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನ ಕಾಮೆಕ್ಸ್ ವಿಭಾಗದಲ್ಲಿ ಆಗಸ್ಟ್ ವಿತರಣೆಯ ಚಿನ್ನ ದರವು ಪ್ರತೀ ಔನ್ಸ್‌ನಲ್ಲಿ 1.70 ಡಾಲರುಗಳ ಕುಸಿತ ಕಂಡು 953.10 ಡಾಲರುಗಳನ್ನು ತಲುಪಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸಿದ್ಧ ಬೆಳ್ಳಿ ದರವು (.999) ಪ್ರತೀ ಕಿಲೋವೊಂದರಲ್ಲಿ 125 ರೂಪಾಯಿಗಳ ಏರಿಕೆ ಕಂಡಿದ್ದು, 22,925 ರೂಪಾಯಿಗಳನ್ನು ತಲುಪಿದೆ. ಶುಕ್ರವಾರ ವ್ಯವಹಾರದ ಅಂತ್ಯದಲ್ಲಿ ಇದು 22,800 ರೂಪಾಯಿಗಳಾಗಿತ್ತು.
ಅದೇ ಹೊತ್ತಿಗೆ ಉತ್ಕೃಷ್ಟ ಚಿನ್ನ (99.5 ಶುದ್ಧ) ಮತ್ತು ಶುದ್ಧ ಚಿನ್ನ (99.9 ಶುದ್ಧ)ಗಳ ದರ ಬದಲಾವಣೆ ಕಾಣದೆ ಕ್ರಮವಾಗಿ 14,955 ಮತ್ತು 15,025 ರೂಪಾಯಿಗಳಲ್ಲೇ ಮುಂದುವರಿದಿದೆ.
|