ವೇತನದ ಖಾತೆಯಿಂದ ಕ್ರೆಡಿಟ್ ಕಾರ್ಡ್ ಗ್ರಾಹಕರ ಬಾಕಿ ಹಣವನ್ನು ಹಿಡಿಯಲು ಬ್ಯಾಂಕ್‌ಗಳು ಮುಂದಾಗಿದ್ದು, ಕ್ರೆಡಿಟ್ ಕಾರ್ಡ್ ಪಾವತಿಗೆ ತಪ್ಪಿದ ನೌಕರರು ವೇತನದಿಂದ ಬಾಕಿ ಮೊತ್ತವನ್ನು ಹಿಡಿದುಕೊಳ್ಳಲು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ.
ದೇಶದ ದೊಡ್ಡ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ತನ್ನ ನಿಯಮಗಳ ಮತ್ತು ಷರತ್ತಿನ ಹೊಸ ಕಲಂನಲ್ಲಿ ಇದನ್ನು ಪರಿಚಯಿಸಿದ್ದು, ಇತರೆ ಬ್ಯಾಂಕ್‌ಗಳೂ ಕೂಡ ಇದೇ ಮಾರ್ಗ ಅನುಸರಿಸಬಹುದೆಂದು ನಿರೀಕ್ಷಿಸಲಾಗಿದೆ. ಇಂತಹ ಬಾಕಿಕಡಿತಗಳನ್ನು ಬ್ಯಾಂಕ್‌ಗೆ ಪಾವತಿ ಮಾಡಲಾಗುವುದು ಮತ್ತು ಇಡೀ ಬಾಕಿಹಣ ವಸೂಲಿಯಾಗುವ ತನಕ ಮುಂದುವರಿಯುತ್ತದೆ.
ಕಾರ್ಡುದಾರರಿಗೆ ಮತ್ತು ಮಾಲೀಕರಿಗೆ ಸಂಬಂಧಿಸಿದ ಯಾವುದೇ ಕಾನೂನು ಇಂತಹ ಕಡಿತ ಮಾಡುವುದಕ್ಕೆ ತಡೆ ವಿಧಿಸುವುದಿಲ್ಲ ಎಂದು ನಿಯಮ ಮತ್ತು ಷರತ್ತಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಕ್ರೆಡಿಟ್ ಕಾರ್ಡ್ ಪಾವತಿಯಲ್ಲಿ ಬಾಕಿವುಳಿಸಿಕೊಂಡವರಿಗೆ ಮಾತ್ರ ಈ ಕಲಂ ಅನ್ವಯವಾಗುತ್ತದೆಂದು ಐಸಿಐಸಿಐ ಬ್ಯಾಂಕ್ ವಕ್ತಾರ ತಿಳಿಸಿದ್ದಾರೆ. ಈ ಕಲಂ ಬಗ್ಗೆ ಎಲ್ಲ ಗ್ರಾಹಕರಿಗೆ ಪೂರ್ವಭಾವಿ ನೋಟಿಸ್ ಕಳಿಸಿರುವುದಾಗಿ ಅವರು ಹೇಳಿದ್ದಾರೆ. |