ಅಮೆರಿಕಾ ಸೇರಿದಂತೆ ಜಾಗತಿಕ ಅರ್ಥ ವ್ಯವಸ್ಥೆಯು ತಳಮಟ್ಟದಿಂದ ಮೇಲೇರುತ್ತಿರುವುದನ್ನು ಗುರುತಿಸಿದ ಹೂಡಿಕೆದಾರ ಕಾರಣದಿಂದ ಏಷ್ಯಾ ಕಚ್ಚಾತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ತೈಲ ಬೆಲೆ 69 ಡಾಲರುಗಳನ್ನು ತಲುಪಿದೆ.
ಕಳೆದ ವರ್ಷ ಜಾಗತಿಕ ಆರ್ಥಿಕತೆಯ ಪ್ರಮುಖ ಅಂಗವೆಂದೇ ಗುರುತಿಸಲ್ಪಡುವ ಅಮೆರಿಕಾದಲ್ಲಿನ ಹಿಂಜರಿತವು ಇದೀಗ ನಿರೀಕ್ಷೆಗೂ ಮೀರಿ ಸುಧಾರಣೆಯತ್ತ ಸಾಗುವ ಲಕ್ಷಣಗಳನ್ನು ತೋರಿಸುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಈ ಬದಲಾವಣೆಗಳು ಕಂಡು ಬಂದಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಯಾರ್ಕ್‌ನ ಪ್ರಮುಖ ಒಪ್ಪಂದ ಸಾದಾ ಕಚ್ಚಾ ತೈಲದ ಸೆಪ್ಟೆಂಬರ್ ವಿತರಣೆಯು 39 ಸೆಂಟ್ಸ್‌ಗಳ ಏರಿಕೆ ಕಂಡಿದ್ದು, ಪ್ರತೀ ಬ್ಯಾರೆಲ್ ತೈಲಕ್ಕೆ 68.44 ಅಮೆರಿಕನ್ ಡಾಲರುಗಳನ್ನು ದಾಖಲಿಸಿದೆ.
ಬ್ರೆಂಟ್ ನಾರ್ತ್ ಸೀ ತೈಲದ ಸೆಪ್ಟೆಂಬರ್ ವಿತರಣೆಯಲ್ಲಿ 38 ಸೆಂಟ್ಸ್‌ಗಳ ಏರಿಕೆಯಾಗಿದ್ದು, 70.70 ಡಾಲರುಗಳನ್ನು ಮುಟ್ಟಿದೆ.
ಶುಕ್ರವಾರ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್ ವ್ಯವಹಾರದ ಸೆಪ್ಟೆಂಬರ್ ವಿತರಣೆಯಲ್ಲಿ 89 ಸೆಂಟ್ಸ್‌ಗಳ ಅಥವಾ ಶೇ.1.3ರ ಏರಿಕೆಯೊಂದಿಗೆ 68.05 ಡಾಲರುಗಳನ್ನು ಪ್ರತೀ ಬ್ಯಾರೆಲ್ ತೈಲಕ್ಕೆ ಮಾರುಕಟ್ಟೆ ದಾಖಲಿಸಿತ್ತು.
|