ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಡಿಎಂಎ: ಇನ್ನು ಮೊಬೈಲ್ ಸೆಟ್ ಆಯ್ಕೆ ನಿಮ್ಮದು! (Mobile | CDMA | CDG | OMH)
 
ಅಮೆರಿಕಾದ ಸಿಡಿಎಂಎ ಅಭಿವೃದ್ಧಿ ಸಮೂಹವು (ಸಿಡಿಜಿ) ತನ್ನ ಜಾಗತಿಕ ಸಿಡಿಎಂಎ ಸೇವಾದಾರ-ಮುಕ್ತ ಹ್ಯಾಂಡ್‌ಸೆಟ್‌ಗಳನ್ನು (ಓಎಂಎಚ್) ಪರಿಚಯಿಸಲು ಭಾರತವನ್ನು ಆಯ್ದುಕೊಂಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಒಂದು ಕೋಟಿ ಗ್ರಾಹಕರನ್ನು ಹೊಂದುವ ಗುರಿಯಿಟ್ಟುಕೊಂಡಿರುವುದರಿಂದ ಬಳಕೆದಾರರಿಗೆ ಆಯ್ಕೆಯ ಅವಕಾಶ ಹೆಚ್ಚುವ ಜತೆಗೆ ಮೊಬೈಲ್ ಹ್ಯಾಂಡ್‌ಸೆಟ್ ದರಗಳೂ ಕಡಿತಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಸಿಡಿಎಂ ಹ್ಯಾಂಡ್‌ಸೆಟ್‌ಗಳು ಸಾಮಾನ್ಯವಾಗಿ ಪ್ರತ್ಯೇಕವಾಗಿ ದೊರಕುತ್ತಿಲ್ಲ. ಬದಲಿಗೆ ಸೇವಾದಾರರೊಂದಿಗೆ ಹೊಂದಿಕೊಂಡೇ ಮಾರುಕಟ್ಟೆಗೆ ಬರುತ್ತಿದೆ. ಆದರೆ ಈ ವ್ಯವಸ್ಥೆಯನ್ನು ಬದಲಾಯಿಸಿ ಗೆಲ್ಲುವ ಭರವಸೆ ಸಿಡಿಜಿಯದ್ದು. ಈ ವರ್ಷದ ಅಕ್ಟೋಬರ್ ಒಳಗೆ ಓಎಂಎಚ್‌ನ್ನು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

"ಇಂಟರ್ನೆಟ್ ಬ್ರೌಸಿಂಗ್, ಇ-ಮೇಲ್, ವೀಡಿಯೋ ಡೌನ್‌ಲೋಡ್, ಮ್ಯೂಸಿಕ್ ಮತ್ತು ವಿಡಿಯೋಗಳನ್ನು ಸ್ಪರ್ಧಾತ್ಮಕ ದರದಲ್ಲಿ ಆನ್‌ಲೈನ್ ಸೇವೆ ಒದಗಿಸುವುದು ಮುಂತಾದ ವಿಶೇಷತೆಗಳನ್ನು ಒಳಗೊಂಡಿರುವ ಸಿಡಿಎಂಎ ಮುಕ್ತ ಹ್ಯಾಂಡ್‌ಸೆಟ್‌‌, ಮಧ್ಯಮ ಹಾಗೂ ಗರಿಷ್ಠ ಆದಾಯ ಹೊಂದಿರುವ ವಲಯದವರನ್ನು ಗುರಿಯಿಟ್ಟುಕೊಂಡಿದೆ. ನಾವು ಇಷ್ಟನ್ನೆಲ್ಲ ಕೊಡುವ ಸಿಡಿಎಂಎ ಹ್ಯಾಂಡ್‌ಸೆಟ್‌ನ ದರಕ್ಕೆ ಜಿಎಸ್‌ಎಂ ಮೊಬೈಲ್ ಕೊಳ್ಳುವುದಾದರೆ ಕೇವಲ ವಾಯ್ಸ್ ಮತ್ತು ಎಸ್‌ಎಂಎಸ್ ಹೊಂದಿರುವ ಮೊಬೈಲ್ ಸಿಗಬಹುದು" ಎಂದು ಸಿಡಿಜಿ ಕಾರ್ಯನಿರ್ವಾಹಕ ನಿರ್ದೇಶಕ ಫೆರ್ರಿ ಲಾಫೋರ್ಜ್ ತಿಳಿಸಿದ್ದಾರೆ.

ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ದೂರವಾಣಿ ಮಾರುಕಟ್ಟೆಯಲ್ಲಿ ಭಾರತವು ಮುಂದಿದ್ದು, ಸಿಡಿಎಂಎ ತಂತ್ರಜ್ಞಾನ ವಿಭಾಗದಲ್ಲೂ ಅಮೆರಿಕಾದ ನಂತರದ ಸ್ಥಾನ ಭಾರತದ್ದೇ. ಹಾಗಾಗಿ ತನ್ನ ಜಾಗತಿಕ ಸೆಟ್ ಬಿಡುಗಡೆಗೆ ಭಾರತವನ್ನೇ ಕಂಪನಿ ಆಯ್ದುಕೊಂಡಿದೆ.

ಪ್ರಸಕ್ತ ಭಾರತದಲ್ಲಿ 31.5 ಕೋಟಿ ಜಿಎಸ್‌ಎಂ (ಏರ್‌ಟೆಲ್, ವೊಡಾಫೋನ್, ಸ್ಪೈಸ್, ಬಿಎಸ್‌ಎನ್‌ಎಲ್, ರಿಲಯೆನ್ಸ್, ಟಾಟಾ ಇಂಡಿಕಾಂ, ಏರ್‌ಸೆಲ್ ಮುಂತಾದುವು) ಗ್ರಾಹಕರಿದ್ದರೆ, ಸಿಡಿಎಂ‌ಎಗೆ 10 ಕೋಟಿ ಗ್ರಾಹಕರಿದ್ದಾರೆ. ಆ ಮೂಲಕ ರಿಲಯೆನ್ಸ್ ಮತ್ತು ಟಾಟಾ ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನವನ್ನು ಜಾಗತಿ ಸಿಡಿಎಂಎ ವಲಯದಲ್ಲಿ ಗಿಟ್ಟಿಸಿಕೊಂಡಿವೆ. ಪ್ರತೀ ತಿಂಗಳೂ 25 ಲಕ್ಷ ಗ್ರಾಹಕರು ಸಿಡಿಎಂಎಗೆ ಸೇರ್ಪಡೆಯಾಗುತ್ತಿದ್ದು, ಇದು ವಿಶ್ವದಲ್ಲೇ ಗರಿಷ್ಠ ಸಂಖ್ಯೆಯಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ