ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯೆನ್ಸ್‌ನಿಂದ 30 ಪೈಸೆಯಲ್ಲಿ ಸ್ಥಳೀಯ ಕರೆ (Reliance | GSM | Karnataka | STD)
 
ಕರ್ನಾಟಕದ ಜಿಎಸ್‌ಎಂ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಕೇವಲ 30 ಪೈಸೆಯಲ್ಲಿ ಸ್ಥಳೀಯ ಮತ್ತು 60 ಪೈಸೆಯಲ್ಲಿ ದೇಶದಾದ್ಯಂತ ಕರೆ ಮಾಡಬಹುದಾದ ಕೊಡುಗೆಯನ್ನು ಜಿಎಸ್‌ಎಂ ಮತ್ತು ಸಿಡಿಎಂಎ ಸೇವೆಗಳನ್ನು ಒದಗಿಸುವ ದೇಶದ ಅತಿ ದೊಡ್ಡ ದೂರವಾಣಿ ಸೇವಾದಾರ ರಿಲಯೆನ್ಸ್ ಕಮ್ಯೂನಿಕೇಷನ್ಸ್ ಪ್ರಕಟಿಸಿದೆ.

'ಟಾಕ್ ನಾನ್ ಸ್ಟಾಪ್ 199' ಎಂಬ ಕೊಡುಗೆಯಲ್ಲಿ ಈ ಅವಕಾಶ ಕೇವಲ ರಿಲಯೆನ್ಸ್ ಜಿಎಸ್‌ಎಂ ಪೋಸ್ಟ್‌ಪೇಡ್ ಗ್ರಾಹಕರಿಗೆ ಮಾತ್ರ. ಆದರೆ ಕೊಡುಗೆಯೊಳಗೆ ಕೆಲವು ನಿಬಂಧನೆಗಳಿವೆ.

ಸ್ಥಳೀಯ ಕರೆಗೆ 60 ಪೈಸೆ ಹಾಗೂ ಎಸ್‌ಟಿಡಿ ಕರೆಗೆ 1.20 ಪೈಸೆಯಂತೆ ಆರಂಭಿಕ ನಿಮಿಷಕ್ಕೆ ದರ ವಿಧಿಸಲಾಗುತ್ತದೆ. ಆದರೆ ಆ ನಂತರದ ನಿಮಿಷಗಳಿಗೆ ಆರಂಭಿಕ ನಿಮಿಷಗಳ ದರಗಳ ಬದಲು ಕ್ರಮವಾಗಿ 30 ಪೈಸೆ ಮತ್ತು 60 ಪೈಸೆ ಮಾತ್ರ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ.

ಇಲ್ಲಿ ಎಸ್‌ಎಂಎಸ್‌ಗಳಿಗೂ ಆಕರ್ಷಕ ದರವನ್ನಿಡಲಾಗಿದೆ. ಸ್ಥಳೀಯ ಎಸ್‌ಎಂಎಸ್‌ಗೆ 30 ಪೈಸೆ ಹಾಗೂ ರಾಷ್ಟ್ರೀಯ ಎಸ್‌ಎಂಎಸ್‌ಗೆ 60 ಪೈಸೆಯನ್ನು ಪೋಸ್ಟ್‌ಪೇಡ್ ಗ್ರಾಹಕರಿಗೆ ವಿಧಿಸಲಾಗುತ್ತದೆ.

ಇದೀಗ ಪೋಸ್ಟ್‌ಪೇಡ್ ಸೇವೆಯನ್ನು ಬಳಸುತ್ತಿರುವವರೂ ಈ ಕೊಡುಗೆಗೆ ವರ್ಗಾವಣೆಗೊಳ್ಳಬಹುದಾಗಿದೆ. ಪ್ರೀಪೇಡ್ ಗ್ರಾಹಕರೂ ಅದೇ ರೀತಿ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆ.

ರಿಲಯೆನ್ಸ್ ತನ್ನ ಪೋಸ್ಟ್‌ಪೇಡ್ ಗ್ರಾಹಕರಿಗೆ ನೀಡಿರುವ ಈ ಕೊಡುಗೆಯ ಪ್ರಕಾರ ಮಿತ ದರದಲ್ಲಿ ರಾಷ್ಟ್ರೀಯ ಕರೆಯನ್ನು ಇತರ ಯಾವ ಸೇವಾದಾರರೂ ರಾಜ್ಯದಲ್ಲಿ ಒದಗಿಸುತ್ತಿಲ್ಲ. ಜತೆಗೆ ಜಿಎಸ್‌ಎಂ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್‌ನಲ್ಲಿ ಎಸ್‌ಎಂಎಸ್ ಪ್ಯಾಕ್‌ಗಳು, ಯೂತ್ ಪ್ಯಾಕ್‌ಗಳು ಮತ್ತು ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತಿರುವ ರಿಲಯೆನ್ಸ್ ಹೊಸ ಹೊಸ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ