ಕೆಳ ಮತ್ತು ಮಧ್ಯಮ ಆದಾಯ ವರ್ಗದ ಮನೆ ಸಾಲಗಳಿಗೆ ಶೇ.ಒಂದರಷ್ಟು ಸಹಾಯಧನ ಸೇರಿದಂತೆ ಹಲವಾರು ವಿನಾಯಿತಿಗಳನ್ನು ವಿತ್ತಸಚಿವ ಪ್ರಣವ್ ಮುಖರ್ಜಿ ಸೋಮವಾರ ಪ್ರಕಟಿಸಿದ್ದಾರೆ ಮತ್ತು ಸೇವಾ ತೆರಿಗೆ ವ್ಯಾಪ್ತಿಯಿಂದ ರಸ್ತೆ ದುರಸ್ತಿ ಮತ್ತು ನಿರ್ವಹಣೆ ಸೇವೆಗಳಿಗೆ ವಿನಾಯಿತಿ ನೀಡಿದ್ದಾರೆ.
2009ನೇ ಸಾಲಿನ ಹಣಕಾಸು ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಮುಖರ್ಜಿ, ಬಜೆಟ್‌ನಲ್ಲಿ ಹೊಸ ಸೇವೆಗಳ ಮೇಲೆ ಸೇವಾ ತೆರಿಗೆಯ ಪ್ರಸ್ತಾವನೆ ಸೆ.1ರಿಂದ ಜಾರಿಗೆ ಬರುತ್ತದೆಂದು ಹೇಳಿದ್ದಾರೆ.
ಕೆಳ ಮತ್ತು ಮಧ್ಯಮ ಆದಾಯವರ್ಗದ ಜನರ ವಸತಿಗೆ ಉತ್ತೇಜನಕ್ಕಾಗಿ 20 ಲಕ್ಷಕ್ಕಿಂತ ಹೆಚ್ಚಿಗೆ ವೆಚ್ಚವಿರದ ಮನೆಗಳಿಗೆ 10 ಲಕ್ಷದವರೆಗೆ ಸಾಲಕ್ಕೆ ಶೇ. ಒಂದರಷ್ಟು ಸಹಾಯಧನ ನೀಡುವುದಾಗಿ ಹೇಳಿದರು.