ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತರಕಾರಿ, ಧಾನ್ಯ ಬೆಲೆ ದುಬಾರಿ; ಜನಸಾಮಾನ್ಯರ ಬದುಕು ಕೂಡ (Vegetable | pulse | potato | onion)
 
ಮಳೆಯ ಕಾರಣದಿಂದಾಗಿ ದೇಶದಾದ್ಯಂತ ಆಲೂಗಡ್ಡೆ, ಟೊಮ್ಯಾಟೋ ಮತ್ತು ಧಾನ್ಯಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರ ಬದುಕು ತೀರಾ ದುಬಾರಿಯಾಗಿದೆ.

ಹಸಿರು ಹೂಕೋಸು ಮತ್ತು ಅಣಬೆಯಂತಹ ವಿಶಿಷ್ಟ ಪ್ರಕಾರಕ್ಕೆ ಮಾತ್ರ ದರಯೇರಿಕೆ ತಟ್ಟಿರುವುದಲ್ಲ. ಭಾರತೀಯರು ಸಾಮಾನ್ಯವಾಗಿ ದಿನನಿತ್ಯ ಬಳಸುವ ಟೊಮ್ಯಾಟೋ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ತರಕಾರಿಗಳು ಕೂಡ ಕೈಗೆಟುಕುತ್ತಿಲ್ಲ.

ಧಾನ್ಯ ಮತ್ತು ತರಕಾರಿ ಬೆಳೆಸುವ ರಾಜ್ಯಗಳಲ್ಲಿ ಮಳೆ ಬಾಧೆಯ ಕಾರಣ ಮಾರುಕಟ್ಟೆ ವೈಪರೀತ್ಯಕ್ಕೆ ಒಳಗಾಗಿದೆ. ಕೆಲವು ಕಡೆ ವಿಪರೀತ ಮಳೆಯಾಗಿದ್ದರೆ, ಇನ್ನು ಕೆಲವು ಕಡೆ ಅಗತ್ಯ ಸಂದರ್ಭಗಳಲ್ಲಿ ಮಳೆಯಾಗಿಲ್ಲ. ಕೆಲ ಪ್ರದೇಶಗಳಂತೂ ಈ ವರ್ಷ ಇನ್ನೂ ಮಳೆ ನೀರನ್ನೇ ಕಂಡಿಲ್ಲ. ಪರಿಣಾಮ ಜನಸಾಮಾನ್ಯರು ತಮ್ಮ ಇಷ್ಟದ ದೈನಂದಿನ ತರಕಾರಿಗಳಿಂದ ದೂರ ಸರಿಯುತ್ತಿದ್ದಾರೆ.

ದೆಹಲಿ ಮಾರುಕಟ್ಟೆಯಲ್ಲೀಗ ಪ್ರತೀ ಕೆ.ಜಿ. ಆಲೂಗಡ್ಡೆ ಬೆಲೆ 20 ರೂಪಾಯಿ. ಕಳೆದ ಕೆಲವು ದಿನಗಳಿಂದಷ್ಟೇ ಇದು ಈ ಮಟ್ಟಕ್ಕೆ ತಲುಪಿದೆ. ಈರುಳ್ಳಿಗೆ ಪ್ರತೀ ಕೇಜಿಗೀಗ 25 ರೂಪಾಯಿ. ದಿನಬಳಕೆಯ ತರಕಾರಿ ಟೊಮ್ಯಾಟೋಗೆ 40 ರೂಪಾಯಿ. ಬೇಳೆಕಾಳಿನ ಬೆಲೆ ಪ್ರತೀ ಕೆ.ಜಿ.ಗೆ 40 ರೂಪಾಯಿ. ಮಾರುಕಟ್ಟೆ ವಲಯದ ಮಾಹಿತಿ ಪ್ರಕಾರ ತರಕಾರಿ ಮತ್ತು ಧಾನ್ಯಗಳ ಬೆಲೆ ಇತ್ತೀಚಿನ ದಿನಗಳಲ್ಲಿ ಶೇಕಡಾ 25ರಷ್ಟು ಏರಿಕೆ ಕಂಡಿದೆ.

ಹೀಗಾದ್ರೆ ಜೀವನ ಸಾಗಿಸೋದು ತುಂಬಾ ಕಷ್ಟ. ಎಲ್ಲ ವಸ್ತುಗಳಲ್ಲೂ ಬೆಲೆಯೇರಿಕೆಯಾಗಿದೆ. ತರಕಾರಿ ಮಾರಾಟಗಾರರು ಯಾವ ಕಾರಣಕ್ಕೂ ಬಗ್ಗುತ್ತಿಲ್ಲ. ಮೊದಲಾದರೆ ನಾನು ಅವರೊಂದಿಗೆ ಚೌಕಾಸಿ ಮಾಡುತ್ತಿದ್ದೆ. ಆದರೆ ಈಗ ಅವರು ಯಾವ ಕಾರಣಕ್ಕೂ ನಮ್ಮಲ್ಲಿ ಚೌಕಾಸಿಗಿಳಿಯುವುದಿಲ್ಲ. ಸಗಟು ಖರೀದಿಯೇ ಗಗನಕ್ಕೆ ಮುಟ್ಟಿದೆ, ನಾವೇನು ಮಾಡೋದು ಅಂತಾರೆ ಎಂದು ಗೃಹಿಣಿಯೊಬ್ಬರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಖಾಸಗಿ ಕಂಪನಿಯೊಂದರಲ್ಲಿ ಗುಮಾಸ್ತನಾಗಿರುವ ವ್ಯಕ್ತಿಯೊಬ್ಬರ ಪ್ರಕಾರ ಅವರಿಗೆ ಈಗಿನ ದರದಲ್ಲಿ ಜೀವನ ನಡೆಸುವುದು ಕಷ್ಟವಂತೆ. ಅದಕ್ಕೆ ಎಲ್ಲದರಲ್ಲೂ ಕಡಿತಗೊಳಿಸಿದ್ದೇವೆ ಎನ್ನುತ್ತಾರೆ.

ಈ ಮೊದಲಾದರೆ ಎಂಟು ಮಂದಿಯಿರುವ ನಮ್ಮ ಕುಟುಂಬದ ಪ್ರತೀ ಹೊತ್ತಿನ ಊಟಕ್ಕೆ ಮೂರು ಕೇಜಿ ತರಕಾರಿ ಬೇಕಾಗಿತ್ತು. ಆದರೆ ಈಗ ಧಾನ್ಯಗಳ ಬೆಲೆಯೂ ದ್ವಿಗುಣಗೊಂಡಿದೆ. ಹಾಗಾಗಿ ನಾವು ಅವುಗಳನ್ನು ಕಡಿಮೆ ಮಾಡುವುದು ಅನಿವಾರ್ಯ ಎಂದಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ ಆಲೂಗಡ್ಡೆ ಬೆಳೆ ಹಾಳಾಗಿರುವುದರಿಂದ ಮಾರುಕಟ್ಟೆಗೆ ಧಕ್ಕೆಯಾಗಿದೆ. ಜತೆಗೆ ಮಾರಾಟಗಾರರು ಕೂಡ ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಪಂಜಾಬ್‌ನಲ್ಲಿನ ಬೆಳೆ ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ. ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಎಪಿಎಂಸಿ ತಿಳಿಸಿದೆ.

ಟೊಮ್ಯಾಟೋ ಬೆಲೆಯೇರಿಕೆಗೆ ಬರ ಪರಿಸ್ಥಿತಿ ಕಾರಣ. ಹಲವು ರಾಜ್ಯಗಳಲ್ಲಿ ಬಿಸಿಲಿನ ಕಾರಣದಿಂದ ಟೊಮ್ಯಾಟೋ ಕೊಳೆತು ಹೋಗಿತ್ತು. ಆದರೆ ಇದೀಗ ಮಳೆ ಆರಂಭವಾಗಿರುವುದರಿಂದ ಬೆಲೆ ಹದಸ್ಥಿತಿಗೆ ಮರಳಲಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಭರವಸೆಯನ್ನು ಈರುಳ್ಳಿ ಬೆಲೆಗೆ ನೀಡಲು ಅವರು ಬಯಸುವುದಿಲ್ಲ. ಈರುಳ್ಳಿಯ ಬಹುದೊಡ್ಡ ಉತ್ಪಾದಕ ರಾಜ್ಯ ಮಹಾರಾಷ್ಟ್ರ. ಅದೀಗ ಮಳೆಯಿಂದ ತತ್ತರಿಸಿ ಹೋಗಿದೆ. ರೈತರು ದಾಸ್ತಾನು ಮಾಡಿರುವ ಗದ್ದೆಗಳಿಂದ ಅದನ್ನು ಸಾಗಿಸುವುದೇ ದೊಡ್ಡ ಕೆಲಸ. ಹಾಗಾಗಿ ಈರುಳ್ಳಿ ಬೆಲೆ ಇನ್ನೂ ಸ್ವಲ್ಪ ದಿನ ಏರಿಕೆ ಗತಿಯಲ್ಲೇ ಸಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ