ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 10,500 ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ: ಸರಕಾರ (freedom fighter | pension | Home Ministry | P Chidambaram)
 
ಗೃಹ ಸಚಿವಾಲಯದಿಂದ ನೇಮಕಗೊಂಡಿದ್ದ ಎರಡು ಸಮಿತಿಗಳ ಶಿಫಾರಸ್ಸುಗಳ ಅನ್ವಯ 10,500 ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಗೃಹಸಚಿವ ಪಿ. ಚಿದಂಬರಂ, ಇನ್ನೊಂದು ಸಮಿತಿಯು 4,000 ಸ್ವಾತಂತ್ರ್ಯ ಹೋರಾಟಗಾರರ ಮನವಿಯನ್ನು ಪರಿಶೀಲನೆ ನಡೆಸುತ್ತಿದೆ ಎಂದೂ ಮಾಹಿತಿ ನೀಡಿದರು.

23 ಹೊಸ ಅರ್ಜಿಗಳನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿರುವ ಬಗ್ಗೆ ತೂರಿ ಬಂದ ಪ್ರಶ್ನೆಯೊಂದಕ್ಕೆ ಅವರು, 2008-09ರ ಸಾಲಿನಲ್ಲಿ ಯಾವುದೇ ಹೊಸ ಅರ್ಜಿಗಳು ಬಂದಿರುವ ಸಾಧ್ಯತೆ ಕಡಿಮೆ. ಪ್ರಸಕ್ತ ನಮ್ಮಲ್ಲಿ ಯಾವುದೇ ಹೊಸ ಅರ್ಜಿಗಳಿಲ್ಲ. ಹಾಗೊಂದು ವೇಳೆ ಬಂದಲ್ಲಿ ಅದರತ್ತ ಸರಕಾರವು ಖಂಡಿತಾ ಗಮನ ಹರಿಸುತ್ತದೆ ಎಂದರು.

ಹೈದರಾಬಾದ್ ಲಿಬರೇಷನ್ ಫ್ರಂಟ್ ಎಂಬ ಸಂಘಟನೆಯು 10,500 ವ್ಯಕ್ತಿಗಳ ಅರ್ಜಿಗಳನ್ನು ಸಲ್ಲಿಸಿತ್ತು. ಅವುಗಳನ್ನು ಅಂಗೀಕರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ