ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಿಂಗ್‌ಫಿಶರ್ ಉದ್ಯೋಗಿಗಳಿಗೆ ವೇತನ ವಿಳಂಬ ಮುನ್ಸೂಚನೆ (Kingfisher | Airlines | employ | Vijay Mallya)
 
ವೇತನ ವಿಳಂಬವಾಗಬಹುದು ಎಂಬ ಇ-ಮೇಲ್ ಸಂದೇಶವನ್ನು ನಷ್ಟದಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಕಿಂಗ್‌ಫಿಶರ್ ಏರ್‌ಲೈನ್ಸ್ ತನ್ನ ಉದ್ಯೋಗಿಗಳಿಗೆ ರವಾನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸುಮಾರು 8,000 ಕೋಟಿ ರೂಪಾಯಿಗಳ ನಷ್ಟದಲ್ಲಿರುವ ಕಿಂಗ್‌ಶಿಶರ್ ಈಗಾಗಲೇ ತನ್ನ ವಿಮಾನಗಳ ಸಂಖ್ಯೆಯನ್ನು 89ರಿಂದ 69ಕ್ಕಿಳಿಸಿದೆ. ಅದೇ ಹೊತ್ತಿಗೆ ಉದ್ಯಮದಲ್ಲಿ ಬದುಕುಳಿಯುವುದು ಕಷ್ಟ ಎಂದಿರುವ ಕಿಂಗ್‌ಫಿಶರ್ ಅಗ್ರ ಅಧಿಕಾರಿಯೊಬ್ಬರು, ವಿಮಾನಯಾನ ಸಂಸ್ಥೆಯ ಭವಿಷ್ಯ ಅಸ್ಪಷ್ಟವಾಗಿದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಆಸಕ್ತಿದಾಯಕ ವಿಚಾರವೆಂದರೆ ಸಾಲ ಹೊಂದಿರುವುದು ಆತಂಕಕಾರಿಯಲ್ಲ, ಅದು ನಮಗೆ ತಿಳಿದ ವಿಚಾರ ಎಂದು ವಿಮಾನಯಾನ ಸಂಸ್ಥೆಯ ಮಾಲಕ ವಿಜಯ ಮಲ್ಯ ಕೇವಲ ಎರಡು ವಾರಗಳ ಹಿಂದಷ್ಟೇ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದಕ್ಕೆ ಸರಕಾರವನ್ನು ಟೀಕಿಸಿದ್ದ ಮಲ್ಯ, ವೈಮಾನಿಕ ಇಂಧನ ದರಗಳನ್ನು ತರ್ಕಸಮ್ಮತವಾಗಿರುವಂತೆ ಮಾಡಲು ಆಗ್ರಹಿಸಿದ್ದರು.

ಸರಕಾರವು ಏರ್‌ಲೈನ್ಸ್‌ಗಳ ಮೇಲೆ ಅಗಾಧ ತೆರಿಗೆಯನ್ನು ವಿಧಿಸುತ್ತಿದೆ. ಅದರಲ್ಲೂ ವೈಮಾನಿಕ ಇಂಧನಗಳ ಮೇಲೆ ಅಧಿಕ ಮಾರಾಟ ತೆರಿಗೆ ಹಾಕಲಾಗುತ್ತದೆ. ಇಲ್ಲಿ ಆರೋಗ್ಯಯುತ ನಡೆಗಳನ್ನು ಕಂಡುಕೊಂಡರೆ ಉದ್ಯಮವು ಚೇತರಿಕೆ ಕಾಣಬಹುದು ಎಂದಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ