ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದಲ್ಲಿ 74,000 ಪತ್ರಿಕೆಗಳು; ಉತ್ತರ ಪ್ರದೇಶದ್ದೇ ಸಿಂಹಪಾಲು (India | newspaper | UP | Mohan Jatua)
 
ಜಾಗತಿಕ ಆರ್ಥಿಕ ಹಿಂಜರಿತವನ್ನು ತೊಡೆದು ಹಾಕುತ್ತಾ ಮುನ್ನುಗ್ಗುತ್ತಿರುವ ಭಾರತೀಯ ಮಾಧ್ಯಮಗಳದ್ದು ಜನಪ್ರಿಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಭಾವಿ ಸ್ಥಾನ. ಅದರಿಂದಾಗಿಯೇ ಭಾರತದಲ್ಲೀಗ 74,409 ವಾರ್ತಾ ಪತ್ರಿಕೆಗಳಿದ್ದು, ಇಲ್ಲಿ ಉತ್ತರ ಪ್ರದೇಶ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸರಕಾರ ತಿಳಿಸಿದೆ.

ಭಾರತೀಯ ವೃತ್ತಪತ್ರಿಕೆ ರಿಜಿಸ್ಟ್ರಾರ್‌ (ಆರ್‌ಎನ್‌ಐ) ದಾಖಲೆಯಲ್ಲಿ 74,000ಕ್ಕೂ ಹೆಚ್ಚು ಪತ್ರಿಕೆಗಳು ನೋಂದಾಯಿಸಿಕೊಂಡಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಮೋಹನ್ ಜತ್ವಾ ಪ್ರಶ್ನೋತ್ತರ ವೇಳೆಯಲ್ಲಿ ಲೋಕಸಭೆಗೆ ಲಿಖಿತವಾಗಿ ತಿಳಿಸಿದ್ದಾರೆ.

ಅತೀ ಹೆಚ್ಚು ಪತ್ರಿಕೆಗಳನ್ನು ಹೊಂದಿದ ಕೀರ್ತಿ ಉತ್ತರ ಪ್ರದೇಶದ್ದು. ಆ ರಾಜ್ಯದಿಂದ 11,789 ಪತ್ರಿಕೆಗಳು ನೋಂದಣಿ ಮಾಡಿಕೊಂಡಿವೆ. 10,066 ಪತ್ರಿಕೆಗಳನ್ನು ಹೊಂದಿರುವ ದೆಹಲಿಯದ್ದು ಎರಡನೇ ಸ್ಥಾನ. 9,127 ಪತ್ರಿಕೆಗಳ ನೋಂದಣಿ ಹೊಂದಿರುವ ಮಹಾರಾಷ್ಟ್ರ ತೃತೀಯ ಸ್ಥಾನದಲ್ಲಿದೆ ಎಂದು ಸಚಿವರು ನೀಡಿದ ಮಾಹಿತಿಯಲ್ಲಿ ಹೇಳಲಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ವೃತ್ತಪತ್ರಿಕೆಗಳಿಗೆ ಪ್ರೋತ್ಸಾಹಿಸುವ ಮೂಲಕ ಮಾಧ್ಯಮ ವ್ಯತ್ಯಾಸಗಳನ್ನು ಸರಿದೂಗಿಸಲು ಸರಕಾರ ಯತ್ನಿಸುತ್ತಿದೆ ಎಂದು ಮತ್ತೊಂದು ಹೇಳಿಕೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ತಿಳಿಸಿದೆ.

ಸರಕಾರಿ ಜಾಹಿರಾತುಗಳಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಕ್ರಮವಾಗಿ ಶೇಕಡಾ.15 ಮತ್ತು ಶೇ.35ರಷ್ಟನ್ನು ನೀಡಬೇಕು ಎಂಬ ನಿಯಮಾವಳಿಗಳಿವೆ. ಈ ಹಿನ್ನಲೆಯಲ್ಲಿ ಹಿಂದುಳಿದ ರಾಜ್ಯ ಮತ್ತು ಭಾಷೆಗಳ ಪತ್ರಿಕೆಗಳನ್ನು ಕೇಂದ್ರ ಸರಕಾರವು ಪ್ರೋತ್ಸಾಹಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ