ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2000ದವರೆಗಿನ ಕೊಳೆಗೇರಿ ಸಕ್ರಮಗೊಳಿಸಲಿರುವ ಮಹಾರಾಷ್ಟ್ರ (slum | Mumbai | Maharashtra | Government)
 
ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಮಾತ್ರ ಉಳಿದಿರುವಂತೆಯೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರಕಾರ, ರಾಜ್ಯದಲ್ಲಿನ 2000 ಇಸವಿಯವರೆಗಿನ ಎಲ್ಲಾ ಕೊಳೆಗೇರಿಗಳನ್ನು ಸಕ್ರಮಗೊಳಿಸುವ ಮೂಲಕ ಜನತೆಗೆ ರಕ್ಷಣೆ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

"2000ದವರೆಗಿನ ಕೊಳೆಗೇರಿಗಳನ್ನು ಕ್ರಮಬದ್ಧಗೊಳಿಸಲು ಮಿತಿಯನ್ನು ವಿಸ್ತರಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಮೊದಲು ಸರಕಾರವು ವಿಶೇಷ ಅರ್ಜಿ ಸಲ್ಲಿಸಲಿದೆ" ಎಂದು ಗೃಹ ಇಲಾಖೆಯು ಸಂಪುಟ ಸಭೆಯ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದೆ.

ಇಲಾಖೆಯ ಪ್ರಸ್ತಾವನೆಯ ಪ್ರಕಾರ ರಾಜ್ಯದಲ್ಲಿ ಜನವರಿ 1, 2000ದೊಳಗೆ ಅಸ್ತಿತ್ವಕ್ಕೆ ಬಂದಿರುವ ಕೊಳೆಗೇರಿಗಳಿಗೆ ರಕ್ಷಣೆ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಈ ಹಿಂದೆ ಸರಕಾರವು 1995ರವರೆಗಿನ ಕೊಳೆಗೇರಿಗಳನ್ನು ಸಕ್ರಮಗೊಳಿಸಿತ್ತು.

1976ರಿಂದೀಚೆಗೆ ಹಲವು ಬಾರಿ ಕೊಳೆಗೇರಿಗಳನ್ನು ಸಕ್ರಮಗೊಳಿಸುವ ಮಿತಿಯನ್ನು ವಿಸ್ತರಿಸುತ್ತಾ ಬರಲಾಗಿದೆ.

1995ರ ನಂತರ ಅಸ್ತಿತ್ವಕ್ಕೆ ಬಂದ ಕೊಳೆಗೇರಿಗಳನ್ನು ಸಕ್ರಮಗೊಳಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ ವಿಧಿಸಿದೆ. ಇದೀಗ ಆ ಮಿತಿಯನ್ನು 2000ದವರೆಗೆ ವಿಸ್ತರಿಸಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ