ನವದೆಹಲಿ: ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಹೊಂಡಾ ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈವಾರ್ಷಿಕ ಅವಧಿಯಲ್ಲಿ ಶೇಕಡಾ 83.28ರ ಅಧಿಕ ಲಾಭಗಳಿಸಿದ್ದು, 500.11 ಕೋಟಿ ರೂಪಾಯಿಗಳ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯು 272.87 ಕೋಟಿ ರೂಪಾಯಿಗಳ ಲಾಭವನ್ನಷ್ಟೇ ಗಳಿಸಿತ್ತು.