ದೇಶದ ಪ್ರಮುಖ ಏರ್‌ಲೈನ್ಸ್‌ಗಳು 2007-08ರ ಸಾಲಿನಲ್ಲಿ 2445 ಕೋಟಿ ರೂ. ನಷ್ಟ ಅನುಭವಿಸಿದೆಯೆಂದು ಸರ್ಕಾರ ಗುರುವಾರ ತಿಳಿಸಿದೆ. ಲೋಕಸಭೆಯ ಪ್ರಶ್ನೋತ್ತರದಲ್ಲಿ ಲಿಖಿತ ಉತ್ತರ ನೀಡುತ್ತಾ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಮೇಲಿನ ವಿಷಯ ತಿಳಿಸಿದರು.
ಈ ಅವಧಿಯಲ್ಲಿ ಲಾಭ ಗಳಿಸಿದ್ದೆಂದರೆ ಪ್ಯಾರಾಮೌಂಟ್ ಏರ್‌ಲೈನ್ಸ್ ಮಾತ್ರವೆಂದು ಸಚಿವರು ಹೇಳಿದರು. ಕಿಂಗ್‌ಫಿಷರ್ ಏರ್‌ಲೈನ್ಸ್ ನಷ್ಟ ಅನುಭವಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಸುಮಾರು 798.35 ಕೋಟಿ ರೂ. ನಷ್ಟ ಅನುಭವಿಸಿದೆ.ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ನೀಡಿದ ಪಟೇಲ್, ಕಳೆದ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಜೆಟ್ ಏರ್‌ವೇಸ್ 253.06 ಕೋಟಿ ರೂ. ನಷ್ಟಕ್ಕೆ ಗುರಿಯಾಗಿದೆಯೆಂದು ತಿಳಿಸಿದರು.
ಪ್ರಮುಖ ಏರ್‌ಲೈನ್ಸ್ ಸಂಸ್ಥೆಗಳು 2005-06 ಮತ್ತು 2006-07ರ ಸಾಲಿನಲ್ಲಿ 2938.25 ಕೋಟಿ ರೂ. ನಷ್ಟ ಅನುಭವಿಸಿರುವುದಾಗಿ ಸಚಿವರು ಹೇಳಿದರು.