ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರತೀ ದಿನ 20 ಕಿ.ಮೀ. ರಸ್ತೆ ನಿರ್ಮಿಸುತ್ತೇವೆ: ಸರಕಾರ (Kamal Nath | government | Minister | Highway)
 
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು ರಸ್ತೆಗಳಿಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಲಿದ್ದು, ಇದೇ ಮೊತ್ತವನ್ನು ಮುಂದಿನ ವರ್ಷಗಳಲ್ಲೂ ಮುಂದುವರಿಸುವ ಮೂಲಕ ಪ್ರತಿ ದಿನ 20 ಕಿ.ಮೀ. ರಸ್ತೆ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಕಮಲನಾಥ್ ತಿಳಿಸಿದ್ದಾರೆ.

"19990-2004ರ ನಡುವೆ ರಸ್ತೆ ನಿರ್ಮಾಣವಾದದ್ದಕ್ಕಿಂತ ಹೆಚ್ಚು ಕಿಲೋ ಮೀಟರ್ ರಸ್ತೆಗಳನ್ನು ನಾವು ನಿರ್ಮಿಸಲಿದ್ದೇವೆ. ಮೂಲಭೂತ ಸೌಕರ್ಯದಲ್ಲಿ ಮಹತ್ವದ ಬದಲಾವಣೆ ತರುವ ಸಲುವಾಗಿ ಪ್ರಸಕ್ತ ವರ್ಷವೊಂದರಲ್ಲೇ 7,000 ಕಿ.ಮೀ. ರಸ್ತೆ ನಿರ್ಮಿಸುವ ಗುರಿ ನಮ್ಮದು" ಎಂದು ಅವರು ವಿವರಿಸಿದರು.

ತಾನು ಪ್ರತಿ ದಿನ 20 ಕಿ.ಮೀ. ರಸ್ತೆ ನಿರ್ಮಿಸುವ ಗುರಿ ಹೊಂದಿದ್ದು, ಸರಕಾರಕ್ಕಿದು ಬೃಹತ್ ಸವಾಲಾಗಿ ಪರಿಣಮಿಸಲಿದೆ. ಸಚಿವಾಲಯವು ಕಾರ್ಯರೂಪಕ್ಕಿಳಿಸುವ ಯೋಜನೆಗಳ ಸಂಭವನೀಯತೆಯ ಅಧ್ಯಯನ ನಡೆಸುವ ಕುರಿತೂ ಸರಕಾರ ಯೋಚಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಹಲವಾರು ಕಾರಣಗಳಿಂದಾಗಿ 150ರಷ್ಟು ಹೆದ್ದಾರಿ ಯೋಜನೆಗಳು ನಿಗದಿಯಂತೆ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ವೆಚ್ಚ ಏರಿಕೆಯಾದದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ಕಾಂಟ್ರಾಕ್ಟುದಾರರ ಲೋಪಗಳಿಂದಾಗಿ ಹೆದ್ದಾರಿ ಕಾಮಗಾರಿಗಳು ನಿಧಾನಗತಿಯಲ್ಲಿವೆ.

ಈ ವರ್ಷ ಏಳು ಸಾವಿರ ಕಿಲೋ ಮೀಟರ್ ಹೆದ್ದಾರಿ ನಿರ್ಮಿಸುವ ಗುರಿಯಿಟ್ಟುಕೊಂಡಿರುವ ಸರಕಾರ ಇದುವರೆಗೆ ನಿರ್ಮಿಸಿದ್ದು ಕೇವಲ 1,500 ಕಿ.ಮೀ. ಮಾತ್ರ ಎಂದೂ ಸಚಿವರು ತಿಳಿಸಿದ್ದಾರೆ.

2009-10ರ ಸಾಲಿನ 50,000 ಕೋಟಿ ರೂಪಾಯಿಗಳಷ್ಟು ಮೊತ್ತದ ರಸ್ತೆ ಯೋಜನೆಗಳಿಗಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಟೆಂಡರ್ ಕರೆದಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ