ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸರಕಾರದಿಂದ ಅಕ್ಕಿ ಹಗರಣ ತನಿಖೆ ಭರವಸೆ (rice | Basmati | CBI | Anand Sharma)
 
ಆಫ್ರಿಕಾಕ್ಕೆ ಬಾಸ್ಮತಿಯೇತರ ಅಕ್ಕಿ ರಫ್ತು ಅವ್ಯವಹಾರ ತನಿಖೆಯನ್ನು ಸಂಸದೀಯ ಸಮಿತಿ ಅಥವಾ ಸಿಬಿಐ ಸುಪರ್ದಿಗೆ ವಹಿಸಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದ ಹಿನ್ನಲೆಯಲ್ಲಿ ಸರಕಾರವು ತನಿಖೆ ನಡೆಸುವ ಭರವಸೆ ನೀಡಿದೆ.

ಪ್ರತೀ ವ್ಯವಹಾರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಡುವುದಿಲ್ಲ. ನಿಯಮಗಳಲ್ಲಿ ಉಲ್ಲಂಘನೆಯಾಗಿದ್ದರೆ ಯಾರಿಗೂ ರಿಯಾಯಿತಿ ನೀಡಲಾಗದು ಎಂದು ಬಿಜೆಪಿ ಮತ್ತು ಜೆಡಿಯು ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.

ಹಗರಣವನ್ನು ಜಂಟಿ ಸಂಸದೀಯ ಸಮಿತಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸುವಂತೆ ಒತ್ತಾಯಿಸಿದ್ದ ವಿರೋಧ ಪಕ್ಷಗಳು, ಶರ್ಮಾ ಉತ್ತರದಿಂದ ತೃಪ್ತರಾಗದೆ ಸಭಾತ್ಯಾಗ ಮಾಡಿದವು.

ಆಫ್ರಿಕನ್ ರಾಷ್ಟ್ರಗಳಿಗೆ ಬಾಸ್ಮತಿಯೇತರ ಅಕ್ಕಿ ರಫ್ತು ಮಾಡಲು ಆಯ್ದ ರಫ್ತುದಾರಿಕಾ ಕಂಪನಿಗಳಿಗೆ ಮಾತ್ರ ಸರಕಾರ ಅವಕಾಶ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ಇದು ನಿಯಮಗಳ ಉಲ್ಲಂಘನೆ. ಇಲ್ಲಿ ಸುಮಾರು 2,500 ಕೋಟಿ ರೂಪಾಯಿಗಳ ಅಕ್ಕಿ ಹಗರಣ ನಡೆದಿದೆಯೆಂದು ಎನ್‌ಡಿಎ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಎಡಪಕ್ಷಗಳು ಆರೋಪಿಸಿದ್ದವು.

ಈ ವಿಚಾರವನ್ನು ಭಾವೋದ್ರೇಕಗೊಳಿಸಬೇಡಿ ಮತ್ತು ಉತ್ಪ್ರೇಕ್ಷಿತಗೊಳಿಸಬೇಡಿ ಎಂದು ಆರಂಭದಲ್ಲಿ ಶರ್ಮಾ ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಲ್.ಕೆ. ಅಡ್ವಾಣಿ, ನಾವು ಭಾವೋದ್ರೇಕಗೊಳಿಸಲು ಬಯಸುವುದಿಲ್ಲ. ಆದರೆ ಸರಕಾರವು ಇದನ್ನು ಕ್ಷುಲ್ಲಕವಾಗಿ ಪರಿಗಣಿಸಬಾರದೆಂಬುದು ನಮ್ಮ ಮನವಿ ಎಂದಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ