ಕ್ಯಾಲಿಫೋರ್ನಿಯಾ, ಶನಿವಾರ, 1 ಆಗಸ್ಟ್ 2009( 13:21 IST )
ಇಂಟರ್ನೆಟ್ ಎಕ್ಸ್‌ಪ್ಲೋರರ್ ಏಕತಾನತೆಯ ಲಾಭ ಪಡೆದು ವಿಶ್ವದ ಎರಡನೇ ಅತಿ ಜನಪ್ರಿಯ ಬ್ರೌಸರ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಫೈರ್‌ಫಾಕ್ಸ್ ಬ್ರೌಸರನ್ನು 100 ಕೋಟಿಗೂ ಹೆಚ್ಚು ಅಂತರ್ಜಾಲ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರಂತೆ.
2004ರ ಅವಧಿಯಲ್ಲಿ ಬ್ರೌಸರ್ ಮಾರುಕಟ್ಟೆಯಲ್ಲಿ ಶೇಕಡಾ 90ರಷ್ಟು ಪಾಲು ಹೊಂದಿದ್ದ ಪ್ರಬಲ ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ಸಡ್ಡು ಹೊಡೆಯುವ ಮೂಲಕ ಫೈರ್‌ಫಾಕ್ಸ್ ತನ್ನ ಕಬಂಧಬಾಹುವನ್ನು ಅಂತರ್ಜಾಲ ವಲಯದಲ್ಲಿ ಹರಡಿಕೊಂಡಿದೆ.
ಇದೀಗ ಒಟ್ಟು ಬೌಸರ್‌ಗಳ ರಾಶಿಯಲ್ಲಿ ಫೈರ್‌ಫಾಕ್ಸ್ 22.5ರ ಪಾಲು ಹೊಂದಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಇದೀಗ ಶೇ.65ರಷ್ಟನ್ನು ಮಾತ್ರ ಹೊಂದಿದೆ.
2004ರಲ್ಲಿ ಶೇ.91.35, 2005ರಲ್ಲಿ ಶೇ.85.88, 2006ರಲ್ಲಿ ಶೇ.80.69, 2007ರಲ್ಲಿ 77.37, 2008ರಲ್ಲಿ ಶೇ.69.80ರಂತೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ತನ್ನ ಕುಸಿತ ದಾಖಲಿಸಿತ್ತು.
2004ರಲ್ಲಿ ಶೇ.3.66ರ ಪಾಲು ಹೊಂದಿದ್ದ ಫೈರ್‌ಪಾಕ್ಸ್ 2005ರಲ್ಲಿ ಶೇ.9, 2006ರಲ್ಲಿ ಶೇ.10.67, 2007ರಲ್ಲಿ ಶೇ.15.84, 2008ರಲ್ಲಿ ಶೇ.20.66ಕ್ಕೆ ತಲುಪಿತ್ತು.
ಉಳಿದಂತೆ 2009ರ ಇದುವರೆಗಿನ ವರದಿಗಳ ಪ್ರಕಾರ ಸಫಾರಿ ಶೇ.8.46, ಗೂಗಲ್ ಕ್ರೋಮ್ ಶೇ.1.74, ಒಪೇರಾ ಶೇ.0.70, ನೆಟ್‌ಸ್ಕೇಪ್ ಶೇ.0.56, ಮೋಜಿಲಾ ಶೇ.0.09ರ ಪಾಲನ್ನು ಬ್ರೌಸರ್ ಮಾರುಕಟ್ಟೆಯಲ್ಲಿ ಹೊಂದಿವೆ.