ಜಾಗತಿಕ ಚಲನೆಗೆ ಸ್ಪಂದಿಸಿದ ಆಭರಣ ತಯಾರಕರು ಖರೀದಿಗೆ ಎರಡನೇ ದಿನವೂ ಮುಗಿ ಬಿದ್ದ ಕಾರಣ, ಶನಿವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಚಿನ್ನ 140 ರೂಪಾಯಿಗಳ ಏರಿಕೆ ಕಂಡಿದ್ದು ಪ್ರತೀ 10 ಗ್ರಾಂ ಬೆಲೆ 15,090 ರೂಪಾಯಿಗಳನ್ನು ದಾಖಲಿಸಿದೆ.
ಆಭರಣ ತಯಾರಕರು ಮತ್ತು ಚಿನಿವಾರ ಪೇಟೆಯ ವ್ಯಾಪಾರಿಗಳು ಜಾಗತಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಖರೀದಿಗೆ ಮುಂದಾದ ಕಾರಣ ಚಿನ್ನವು ಎರಡನೇ ದಿನದಲ್ಲಿ ಪ್ರಬಲವೆನ್ನಬಹುದಾದ 220 ರೂಪಾಯಿಗಳ ಏರಿಕೆ ಕಂಡಿದೆ.
ಬೆಳ್ಳಿ ಬೆಲೆಯಲ್ಲೂ 300 ರೂಪಾಯಿಗಳ ಹೆಚ್ಚಳವಾಗಿದೆ. ಕೈಗಾರಿಕಾ ವಲಯ ಮತ್ತು ಆಭರಣ ತಯಾರಕರ ಪ್ರಭಾವದಿಂದ ಪ್ರತೀ ಕೆ.ಜಿ. ಬೆಳ್ಳಿಗೀಗ 22,800 ರೂಪಾಯಿಗಳು.
ಬೆಲೆ ಹೆಚ್ಚಳವಾಗುತ್ತಿದ್ದರೂ ಹಬ್ಬ ಮತ್ತು ಮದುವೆಗಳ ಅವಧಿ ಸಮೀಪಿಸುತ್ತಿರುವ ಕಾರಣಗಳಿಂದಾಗಿ ಬೆಳ್ಳಿ ಬೆಲೆ ಹೆಚ್ಚಾಗುತ್ತಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನ ಬೆಲೆಯು 20.80 ಡಾಲರುಗಳ ಏರಿಕೆಯಾಗಿದ್ದು, ಪ್ರತೀ ಔನ್ಸ್ 954.50 ಡಾಲರುಗಳನ್ನು ತಲುಪಿದೆ. ವ್ಯವಹಾರದ ಮಧ್ಯದಲ್ಲಿ 958.20 ಡಾಲರುಗಳನ್ನು ಮಾರುಕಟ್ಟೆ ದಾಖಲಿಸಿತ್ತು.
ಉತ್ಕೃಷ್ಟ ಮತ್ತು ಆಭರಣ ಚಿನ್ನಗಳ ಬೆಲೆಯು 140 ರೂಪಾಯಿಗಳ ಹೆಚ್ಚಳದೊಂದಿಗೆ ಕ್ರಮವಾಗಿ 15,090 ಮತ್ತು 14,940 ರೂಪಾಯಿಗಳನ್ನು ಪ್ರತೀ 10 ಗ್ರಾಂಗಳಿಗೆ ದಾಖಲಿಸಿದೆ. ಪವನ್ ಚಿನ್ನದಲ್ಲಿ 25 ರೂಪಾಯಿಗಳ ಏರಿಕೆಯಾಗಿ 12,475 ರೂಪಾಯಿ ಮುಟ್ಟಿತು.
ಸಿದ್ಧ ಬೆಳ್ಳಿಯಲ್ಲಿ 300 ರೂಗಳ ಹೆಚ್ಚಳವಾಗಿ 22,800 ರೂಪಾಯಿಗಳನ್ನು ಪ್ರತೀ ಕೆಜಿಗೆ ದಾಖಲಿಸಿದ್ದರೆ, ವಾರವನ್ನಾಧರಿಸಿದ ವಿತರಣೆಯಲ್ಲಿ 220 ರೂಪಾಯಿಗಳ ಏರಿಕೆಯಾಗಿ 22,500 ರೂಪಾಯಿಗಳಲ್ಲಿ ವ್ಯವಹಾರ ನಿಗದಿಯಾಯಿತು.
100 ಬೆಳ್ಳಿ ನಾಣ್ಯಗಳ ಖರೀದಿಯು 29.400 ಹಾಗೂ ಮಾರಾಟವು 29,000ರ ಮಟ್ಟದಲ್ಲಿ ಇಂದು ನಡೆದಿದೆ.