ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿಯಾದ ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ ,ಜುಲೈ ತಿಂಗಳಲ್ಲಿ 78,074ಬಿಡಿ ವಾಹನಗಳ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.33.36 ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ 58,543 ಬಿಡಿ ವಾಹನಗಳು ಮಾರಾಟವಾಗಿದ್ದವು. ದೇಶಿಯ ಮಾರುಕಟ್ಟೆಯಲ್ಲಿ 67,528 ವಾಹನಗಳು ಮಾರಾಟವಾಗಿವೆ. ಇದು ಕಳೆದ ವರ್ಷದ 52,911 ವಾಹನಗಳಿಗೆ ಹೋಲಿಸಿದಲ್ಲಿ ಶೇ.27.63 ರಷ್ಟು ವೃದ್ಧಿಯಾಗಿದೆ.
ಇದರಂತೆ ರಫ್ತು ಸಹ ಏರಿಕೆಯಾಗಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ 5,632 ವಾಹನಗಳು ರಫ್ತಾಗಿದ್ದರೆ,ಈ ವರ್ಷ 10,546 ವಾಹನಗಳು ರಫ್ತಾಗಿವೆ. ಶೇ.87.25 ರಷ್ಟು ಹೆಚ್ಚಳವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.