ಖಾಸಗಿ ವಿಮಾನಯಾನ ಸಂಸ್ಥೆಗಳು ಅಗಸ್ಟ್ 18 ರಂದು ಬೇಲೌಟ್ ಪ್ಯಾಕೇಜ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಅಂದು ಹೆಚ್ಚುವರಿ ವಿಮಾನಗಳ ಹಾರಾಟ ನಡೆಸಲಾಗುವುದು ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ.
ಏರ್‌ಇಂಡಿಯಾ ದಿನನಿತ್ಯದ ವಿಮಾನ ಹಾರಾಟಗಳನ್ನು ಹೊರತುಪಡಿಸಿ 25 ಸಾವಿರ ಪ್ರಯಾಣಿಕರಿಗಾಗಿ ಹೆಚ್ಚುವರಿ ವಿಮಾನಗಳ ಹಾರಾಟಕ್ಕೆ ನಿರ್ಧರಿಸಲಾಗಿದೆ ಎಂದು ಏರ್‌ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ದೇಶದ ಪ್ರಮುಖ ಆರು ಖಾಸಗಿ ವಿಮಾನಯಾನ ಸಂಸ್ಥೆಗಳು ಹೆಚ್ಚುತ್ತಿರುವ ಇಂಧನ ದರ ವಿಮಾನ ನಿಲ್ದಾಣ ತೆರಿಗೆಗಳಿಂದಾಗಿ ಏರ್‌ಲೈನ್ಸ್‌ಗಳು ನಷ್ಟವನ್ನು ಎದುರಿಸುತ್ತಿರುವುದರಿಂದ ಕೇಂದ್ರ ಸರಕಾರ ಬೇಲೌಟ್ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಅಗಸ್ಟ್ 18 ರಂದು ಪ್ರತಿಭಟನೆ ನಡೆಸುತ್ತಿವೆ.