ವಿಶ್ವದ ಅತ್ಯಂತ ಅಗ್ಗದ ಕಾರು ನ್ಯಾನೋ ತಮ್ಮದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಜನತೆಗೆ ಮತ್ತೆ ನಿರಾಸೆಯಾಗುವ ಸುದ್ದಿ ಬಂದಿದೆ. 2010ರ ವೇಳೆಗೆ 1 ಲಕ್ಷ ಮಂದಿಗೆ ಕಾರು ವಿತರಿಸುವುದಾಗಿ ಟಾಟಾ ಮೋಟಾರ್ಸ್ ಹೇಳಿಕೆ ನೀಡಿತ್ತು. ಆದರೆ ಇದೀಗ ಕೇವಲ 60 ಸಾವಿರ ಕಾರುಗಳನ್ನು ಮಾತ್ರ ಪೂರೈಸಲು ಸಾಧ್ಯ ಎಂದು ಸ್ಪಷ್ಟನೆ ನೀಡಿದೆ.