ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರ್ ಇಂಡಿಯಾಕ್ಕೂ ಪ್ಯಾಕೇಜ್ ನೀಡಲ್ಲ, ಇನ್ನು ನಿಮಗೆಲ್ಲಿ: ಸರಕಾರ (Private Airlines | Bailout | Strike | Government)
 
ಆಗಸ್ಟ್ 18ರ ಮುಷ್ಕರವನ್ನು ಭಾನುವಾರ ವಾಪಸ್ ಪಡೆದ ಹೊರತಾಗಿಯೂ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಪರಿಹಾರ ಪ್ಯಾಕೇಜ್ ನೀಡುವುದು ಅಸಾಧ್ಯ, ನಾವು ಏರ್ ಇಂಡಿಯಾಕ್ಕೂ ಯಾವುದೇ ಪ್ಯಾಕೇಜ್ ನೀಡುತ್ತಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಮಾತನಾಡುತ್ತಾ, ಖಾಸಗಿ ವೈಮಾನಿಕ ಸಂಸ್ಥೆಗಳಿಗೆ ಆರ್ಥಿಕ ಪ್ಯಾಕೇಜ್ ನೀಡುವ ಯಾವುದೇ ಪ್ರಶ್ನೆಯೂ ಸರಕಾರದ ಮುಂದಿಲ್ಲ ಎಂದರು.

ಇದಕ್ಕೆ ಕಾರಣವನ್ನೂ ವಿವರಿಸಿದ ಅವರು, ನಾವು ಸರಕಾರದ ಮಾಲಕತ್ವದ ಏರ್ ಇಂಡಿಯಾ ಸಂಸ್ಥೆಗೆ ಕೂಡ ಪ್ಯಾಕೇಜ್ ನೀಡುತ್ತಿಲ್ಲ. ಇನ್ನೆಲ್ಲಿಯ ಖಾಸಗಿ ವಿಮಾನಯಾನ ಸಂಸ್ಥೆಗಳು ಎಂದರು.

ಆದರೆ ಸರಕಾರವು ಸಂಕಷ್ಟದಲ್ಲಿರುವ ವೈಮಾನಿಕ ಸಂಸ್ಥೆಗಳನ್ನು ತನ್ನಿಂದ ಸಾಧ್ಯವಾಗುವ ರೀತಿಯಲ್ಲಿ ಬೆಂಬಲಿಸುವುದಾಗಿ ತಿಳಿಸಿದರು. ದೇಶದ ಆರ್ಥಿಕತೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು, ಉದ್ಯಮದ ಕಷ್ಟಗಳನ್ನು ಸರಕಾರ ಅರ್ಥೈಸಿಕೊಂಡಿದೆ ಎಂದಿದ್ದಾರೆ.

ದಿನಂಪ್ರತಿ ಸುಮಾರು ಒಂದು ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಗಳು ಆಗಸ್ಟ್ 18ರಂದು ಮುಷ್ಕರ ಹೂಡುವುದಾಗಿ ಸರಕಾರವನ್ನು ಬೆದರಿಸಿದ್ದವು. ಇದಕ್ಕೆ ಪ್ರತಿಯಾಗಿ ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಿದ ಒಂದೊಂದೆ ವಿಮಾನಯಾನ ಸಂಸ್ಥೆಗಳು ಮುಷ್ಕರದಿಂದ ಹಿಂದಕ್ಕೆ ಸರಿದಿದ್ದವು. ಕೊನೆಗೆ ದಿಕ್ಕೇ ತೋಚದಂತಾಗಿದ್ದ ಭಾರತೀಯ ವೈಮಾನಿಕ ಸಂಸ್ಥೆಗಳ ಒಕ್ಕೂಟವು ಆಗಸ್ಟ್ 18ರಂದು ಮುಷ್ಕರ ನಡೆಸುವುದಿಲ್ಲ ಎಂದು ಪ್ರಕಟಿಸಿತು.

ಕಿಂಗ್‌ಫಿಶರ್ ಏರ್‌ಲೈನ್ಸ್, ಜೆಟ್ ಏರ್‌ವೇಸ್, ಗೋ ಏರ್, ಸ್ಪೈಸ್ ಜೆಟ್ ಮತ್ತು ಇಂಡಿಗೋ ಖಾಸಗಿ ವಿಮಾನಯಾನ ಸಂಸ್ಥೆಗಳ ಈ ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆಗಳಿಗೆ ಮಾತುಕತೆಯ ಮುಖಾಂತರ ಸರಕಾರದಿಂದ ಪರಿಹಾರ ದೊರೆಯುವ ಭರವಸೆಯಲ್ಲಿವೆ.

ವಿಮಾನ ನಿಲ್ದಾಣದ ಬಳಕೆ-ನಿರ್ವಹಣಾ ವೆಚ್ಚ, ವೈಮಾನಿಕ ಇಂಧನದ ಮೇಲಿನ ತೆರಿಗೆ ದುಬಾರಿ ಸೇರಿದಂತೆ ವೈಮಾನಿಕ ಉದ್ಯಮವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವೆಲ್ಲವನ್ನೂ ಪರಿಷ್ಕರಣ ನಡೆಸಬೇಕು ಮತ್ತು ಉದ್ಯಮಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದು ಖಾಸಗಿಗಳವರು ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ