ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸರ್ಕಾರ ಪಕ್ಷಪಾತಿಯಲ್ಲ; ಸಾರ್ವಜನಿಕ ಹಿತಾಸಕ್ತಿ ರಕ್ಷಿಸುತ್ತಿದೆ: ದಿಯೋರಾ (Ambani Brothers | Gas Row | Murli Deora | Indian Government)
 
ಅಂಬಾನಿ ಸಹೋದರರ ನಡುವಿನ ನೈಸರ್ಗಿಕ ಅನಿಲ ವಿವಾದದಲ್ಲಿನ ಪಕ್ಷಪಾತ ಆರೋಪವನ್ನು ನಿರಾಕರಿಸಿರುವ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ, ಸರಕಾರವು ಇಲ್ಲಿ ಯಾವುದೇ ಬಣವನ್ನು ಬೆಂಬಲಿಸುತ್ತಿಲ್ಲ; ಅನಿಲವು ರಾಷ್ಟ್ರೀಯ ಸ್ವತ್ತಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಮಾತ್ರ ಅಡಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂಬಾನಿ ಕುಟುಂಬದ ನಡುವಿನ ಈ ವಿವಾದದಲ್ಲಿ ಸರಕಾರವು ಯಾವುದೇ ಪಾತ್ರವಹಿಸುತ್ತಿಲ್ಲ ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ ಸಚಿವರು, ನೈಸರ್ಗಿಕ ಅನಿಲ ಬಳಕೆಯನ್ನು ನಿಯಂತ್ರಿಸುವ ತನ್ನ ಕಾನೂನು ಬದ್ಧವಾದ ಹಕ್ಕನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನವನ್ನೂ ನಡೆಸಲಿದೆ ಎಂದಿದ್ದಾರೆ.

"ಎರಡು ಉದ್ಯಮಿಗಳ ನಡುವೆ ಅಥವಾ ಸಂಸ್ಥೆಗಳ ನಡುವಿನ ವೈಯಕ್ತಿಕ ವಿವಾದದಲ್ಲಿ ನಾವು ಮಾಡುವುದೇನೂ ಇಲ್ಲ. ಆದರೆ ಸರಕಾರದ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ. ಇದು ನಮ್ಮ ಸಂವಿಧಾನಾತ್ಮಕ ಮತ್ತು ಕಾನೂನು ಬಾಧ್ಯತೆಯಾಗಿದೆ" ಎಂದು ಲೋಕಸಭೆಯಲ್ಲಿ ಪೆಟ್ರೋಲಿಯಂ ಸಚಿವರು ತಿಳಿಸಿದರು.

ಸಮಾಜವಾದಿ ಪಕ್ಷದ ಆರೋಪಕ್ಕೆ ಉತ್ತರಿಸುತ್ತಿದ್ದ ಅವರು, ಉತ್ತರ ಪ್ರದೇಶಕ್ಕೆ ನೈಸರ್ಗಿಕ ಅನಿಲ ಹಂಚಿಕೆಯಲ್ಲಿ ಸರಕಾರವು ಯಾವುದೇ ತಾರತಮ್ಯ ಮಾಡುತ್ತಿಲ್ಲ. ಅನಿಲ್ ಅಂಬಾನಿಯವರ ಪ್ರಸ್ತಾವಿತ ದಾದ್ರಿ ಪವರ್ ಪ್ಲಾಂಟ್‌ಗಾಗಿ ಕೆಜಿ-ಡಿ6 ಫೀಲ್ಡ್‌ನಿಂದ ನೈಸರ್ಗಿಕ ಅನಿಲವನ್ನು ಇದೇ ರೀತಿಯ ಇತರ ಗ್ಯಾಸ್ ಆಧರಿತ ಪವರ್ ಪ್ಲಾಂಟ್‌ಗಳಿಗೆ ಗ್ಯಾಸ್ ಹಂಚುವ ಸಂದರ್ಭದಲ್ಲಿ ನೀಡಲಾಗುತ್ತದೆ. ಬಾಂಬೆ ಹೈಕೋರ್ಟ್ ತೀರ್ಪು ಸರಕಾರದ ಗ್ಯಾಸ್ ಬಳಕೆಯ ನಿಯಮಗಳಿಗೆ ತಿದ್ದುಪಡಿ ತಂದಿದೆ ಎಂದರು.

ಈ ಉತ್ತರದಿಂದ ತೃಪ್ತರಾಗದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಪೆಟ್ರೋಲಿಯಂ ಸಚಿವರ ವಿರುದ್ಧ ಮತ್ತೆ ಭ್ರಷ್ಟಾಚಾರದ ಆರೋಪ ಮಾಡಿದರು. ಅಲ್ಲದೆ ರಾಜಿನಾಮೆಯ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ವಿವಾದದಲ್ಲಿ ದಿಯೋರಾ ಭಾಗಿಯಾಗಿದ್ದಾರೆ ಎಂಬುದನ್ನು ಮುಲಾಯಂ ಇದೇ ಸಂದರ್ಭದಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ.

ಮುಖೇಶ್ ಅಂಬಾನಿಯವರ ರಿಲಯೆನ್ಸ್ ಇಂಡಸ್ಟ್ರೀಸ್ ಪರವಾಗಿ ಸರಕಾರ ಕೆಲಸ ಮಾಡುತ್ತಿದೆ ಎಂದು ಅನಿಲ್ ಅಂಬಾನಿ ಆರೋಪಿಸಿದ ಮರುದಿನ ಸಮಾಜವಾದಿ ಪಕ್ಷದ ಸದಸ್ಯರೊಬ್ಬರು ಲೋಕಸಭೆಯಲ್ಲಿ ಜುಲೈ 29ರಂದು ಪ್ರಶ್ನೆಗಳನ್ನೆತ್ತಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದಿಯೋರಾ ಸ್ಪಷ್ಟನೆ ನೀಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ