ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅರ್ಥ ವ್ಯವಸ್ಥೆ ಸುಧಾರಣೆಯತ್ತ; ತೈಲ ಬೆಲೆಯೀಗ 71 ಡಾಲರ್ (Oil price | Asian trade | US | Brent North Sea crude)
 
ಸಮಸ್ಯೆ ಎದುರಿಸುತ್ತಿರುವ ಜಾಗತಿಕ ಆರ್ಥಿಕತೆಯು ದುರಸ್ತಿ ಹಾದಿಯಲ್ಲಿದ್ದಾಗಲೇ ಏಷಿಯಾ ಮಾರುಕಟ್ಟೆಯಲ್ಲಿನ ನಡು ರಾತ್ರಿಯ ನಾಟಕೀಯ ಬೆಳವಣಿಗೆಯೊಂದರಲ್ಲಿ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 71 ಡಾಲರುಗಳನ್ನು ದಾಖಲಿಸಿದೆ.

ನ್ಯೂಯಾರ್ಕ್ ಪ್ರಮುಖ ಒಪ್ಪಂದದ ಸಾದಾ ಕಚ್ಚಾ ತೈಲದ ಸೆಪ್ಟೆಂಬರ್ ವಿತರಣೆಯು 15 ಸೆಂಟ್ಸ್ ಕುಸಿತ ಕಂಡು 71.43 ಅಮೆರಿಕನ್ ಡಾಲರುಗಳನ್ನು ಪ್ರತಿ ಬ್ಯಾರೆಲ್‌ಗೆ ವ್ಯವಹಾರ ನಡೆಸಿತು. ಮಂಗಳವಾರ ಅಮೆರಿಕನ್ ವ್ಯವಹಾರದಲ್ಲಿ 2.13 ಡಾಲರುಗಳ ಏರಿಕೆ ದಾಖಲಾಗಿತ್ತು.

ನ್ಯೂಯಾರ್ಕ್ ಬೆಂಚ್‌ಮಾರ್ಕ್ ಒಪ್ಪಂದವು ಗರಿಷ್ಠ 72.20 ಡಾಲರುಗಳನ್ನು ತಲುಪಿ ದಾಖಲೆ ನಿರ್ಮಿಸಿತ್ತು. ಇದು ಕಳೆದ ಜೂನ್ ನಂತರ ದಾಖಲಾದ ಗರಿಷ್ಠ ಬೆಲೆ.

ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ಸೆಪ್ಟೆಂಬರ್ ವಿತರಣೆಯು ಒಂಬತ್ತು ಸೆಂಟ್ಸ್‌ಗಳ ಏರಿಕೆಯಾಗಿ 73.64 ಡಾಲರುಗಳನ್ನು ಪ್ರತಿ ಬ್ಯಾರೆಲ್‌ಗೆ ದಾಖಲಿಸಿತು.

ಜಾಗತಿಕ ಅರ್ಥ ವ್ಯವಸ್ಥೆಯು ಸುಧಾರಣೆಯಲ್ಲಿದೆ, ಕಾರ್ಪೊರೇಟ್ ಲಾಭವೂ ಅತ್ಯುತ್ತಮವಾಗಿದೆ ಎಂಬ ವರದಿಗಳು ಬಂದ ಹಿನ್ನಲೆಯಲ್ಲಿ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆ ಕಾಣಲು ಸಾಧ್ಯವಾಯಿತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ದುರ್ಬಲ ಡಾಲರ್ ಕೂಡ ತೈಲ ಬೆಲೆಯೇರಿಕೆಯಲ್ಲಿ ಪಾತ್ರವಹಿಸಿದೆ. ದಿನಬಳಕೆಯ ವಸ್ತುಗಳು ಅಮೆರಿಕನ್ ಡಾಲರುಗಳಲ್ಲಿ ವ್ಯವಹಾರ ನಡೆಸಿದ್ದು, ಇತರ ಕರೆನ್ಸಿಗಳೆದುರು ತೀರಾ ಸಪ್ಪೆಯಾಗಿತ್ತು ಎಂದು ವರದಿಗಳು ತಿಳಿಸಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ