ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾದಿಂದ 2,475 ನ್ಯಾನೋ ಕಾರುಗಳ ಹಸ್ತಾಂತರ (Tata Nano | Nano | Ratan Tata | Tata Motars)
 
ಮಹತ್ವಾಕಾಂಕ್ಷೆಯ ನ್ಯಾನೋ ಕಾರು ಅಧಿಕೃತವಾಗಿ ಬಿಡುಗಡೆಗೊಂಡ ನಂತರದ 15 ದಿನಗಳ ಅವಧಿಯಲ್ಲಿ 2,475 ಕಾರುಗಳನ್ನು ಮೀಸಲು ಗ್ರಾಹಕರಿಗೆ ವಿತರಿಸಲಾಗಿದ್ದು, ಜುಲೈ 2010ರೊಳಗೆ 60,000 ಕಾರುಗಳನ್ನು ವಿತರಿಸುವ ಗುರಿ ಟಾಟಾ ಮೋಟಾರ್ಸ್‌‌ನದ್ದು.

ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾರವರು ಮೊದಲ ನ್ಯಾನೋ ಕಾರಿನ ಕೀಯನ್ನು ಜುಲೈ 17ರಂದು ಮುಂಬೈ ನಿವಾಸಿ ಅಶೋಕ್ ರಘುನಾಥ ವಿಚಾರೆಯವರಿಗೆ ಹಸ್ತಾಂತರಿಸಿದ್ದರು.

ಜಗತ್ತಿನ ಅಗ್ಗದ ಕಾರೆಂಬ ಹೆಗ್ಗಳಿಕೆಗೆ ತುತ್ತಾಗಿರುವ ನ್ಯಾನೋ ಅತಿ ಚಿಕ್ಕ ಕಾರು ಕೂಡ ಹೌದು. ಒಂದು ಲಕ್ಷ ರೂಪಾಯಿಯಿಂದ ಹಿಡಿದು 1,75,000 ರೂಪಾಯಿವರೆಗಿನ ಮಾಡೆಲ್‌ಗಳು ಶೋರೂಂ ಬೆಲೆಯಲ್ಲಿ ಲಾಟರಿಯಲ್ಲಿ ಆಯ್ಕೆಯಾದ ಗ್ರಾಹಕರಿಗೆ ನೀಡಲಾಗುತ್ತಿದೆ.

2010ರ ಜುಲೈ ತಿಂಗಳೊಳಗೆ 60,000 ನ್ಯಾನೋ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಗುರಿ ಈಗ ಟಾಟಾ ಸಂಸ್ಥೆಯದ್ದು. 2009-10ರ ಆರ್ಥಿಕ ವರ್ಷಾಂತ್ಯದೊಳಗೆ ಸನಂದಾ ಕಾರು ಉತ್ಪಾದನಾ ಘಟಕವು ಕಾರ್ಯಾರಂಭ ಮಾಡಲಿದ್ದು, ನಂತರ ಪ್ರತೀ ವರ್ಷ 2.5 ಲಕ್ಷ ನ್ಯಾನೋ ಕಾರುಗಳನ್ನು ರಸ್ತೆಗೆ ಬಿಡಲಾಗುತ್ತದೆ. ಪ್ರಸಕ್ತ ಪಂತಾನಗರದಲ್ಲಿನ ಉತ್ಪಾದನಾ ಘಟಕದಿಂದ ವರ್ಷಕ್ಕೆ 50,000 ಕಾರುಗಳನ್ನಷ್ಟೇ ಪಡೆಯಲು ಸಾಧ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕಳೆದ ತಿಂಗಳು ಟಾಟಾ ತನ್ನ ವ್ಯವಹಾರದಲ್ಲೂ ಗಣನೀಯ ಏರಿಕೆ ಕಂಡಿದೆ. ಸಂಸ್ಥೆಯ ವಾಹನಗಳ ಮಾರಾಟದಲ್ಲಿ ಶೇ.18ರ ಹೆಚ್ಚಳವಾಗಿದ್ದು, 48,054 ವಾಹನಗಳನ್ನು ತಿಂಗಳೊಂದರಲ್ಲೇ ಮಾರಾಟ ಮಾಡಲಾಗಿದೆ. ಪ್ರಯಾಣಿಕರ ವಾಹನ ಮಾರಾಟದಲ್ಲಿ ಶೇ.17.33ರ ಏರಿಕೆಯಾಗಿದೆ. ದೇಶದಲ್ಲಿ ಮಾರಾಟವಾಗಿರುವ ಈ ಪ್ರಯಾಣಿಕ ವಾಹನಗಳ ಸಂಖ್ಯೆ 17,191.

ಪಶ್ಚಿಮ ಬಂಗಾಲದ ಸಿಂಗೂರಿನಲ್ಲಿನ ತೊಂದರೆ ಸೇರಿದಂತೆ ಹಲವಾರು ಸಂಕಷ್ಟಗಳನ್ನೆದುರಿಸಿದ ರತನ್ ಟಾಟಾ ಕೊನೆಗೂ ಬಹುನಿರೀಕ್ಷಿತ ನ್ಯಾನೋವನ್ನು ನಿಗದಿತ ಅವಧಿಯಲ್ಲಿ ಬಿಡುಗಡೆ ಮಾಡಿದ್ದರು. ಇನ್ನು ಕೆಲವೇ ವರ್ಷಗಳಲ್ಲಿ ಆಫ್ರಿಕಾ ರಾಷ್ಟ್ರಗಳು, ಲ್ಯಾಟಿನ್ ಅಮೆರಿಕಾದಲ್ಲೂ ನ್ಯಾನೋ ಲಭ್ಯವಾಗುವಂತೆ ಮಾಡುವ ಗುರಿಯೂ ಇದೆ ಎಂದು ಇತ್ತೀಚೆಗಷ್ಟೇ ಟಾಟಾ ತಿಳಿಸಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ