ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂದಿನ 2-3 ವಾರ ಮಾನ್ಸೂನ್ ದುರ್ಬಲ: ವರದಿ (Poor monsoon | India | rainfall | weather forecast)
 
ಮಾನ್ಸೂನ್ ಚೇತರಿಕೆಯ ಭರವಸೆಗಳನ್ನು ತಳ್ಳಿ ಹಾಕಿರುವ ಅಮೆರಿಕಾ ಮೂಲದ ಹವಾಮಾನ ಮುನ್ಸೂಚನಾ ತಂಡವೊಂದು, ಭಾರತದಲ್ಲಿ ಮುಂದಿನ ಎರಡರಿಂದ ಮೂರು ವಾರಗಳ ಕಾಲ ಸರಾಸರಿಗಿಂತ ಕಡಿಮೆ ಮಳೆಯಾಗಲಿದೆ ಎಂದಿದೆ.

ಭಾರತದಲ್ಲಿನ ಮಾನ್ಸೂನ್ ಮುಂದಿನ 2-3 ವಾರಗಳ ಕಾಲ ದುರ್ಬಲವಾಗಿಯೇ ಮುಂದುವರಿಯಲಿದೆ. ರಾಷ್ಟ್ರದ ಬಹು ಭಾಗಗಳಲ್ಲಿ ಮಳೆಯ ಪ್ರಮಾಣ ಸರಾಸರಿಗಿಂತ ಕಡಿಮೆಯಾಗಬಹುದು ಎಂದು ವಿಶ್ವ ಹವಾಮಾನ ಮುನ್ಸೂಚನಾ ಸಂಸ್ಥೆಯೊಂದು ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಭಾರತೀಯ ಹವಾಮಾನ ಇಲಾಖೆಯು ಜುಲೈ 15ರಂದು ಶೇ.27 ಹಾಗೂ ಜುಲೈ 29ರಂದು ಶೇ.18ರಷ್ಟು ಮಳೆಯ ಪ್ರಮಾಣದಲ್ಲಿ ಕೊರತೆಯಾಗಿರುವ ಬಗ್ಗೆ ವರದಿ ನೀಡಿತ್ತು.

ಮಳೆ ಕಡಿಮೆಯಾದ ಕಾರಣ ಕೃಷಿ ವಲಯದಲ್ಲಿ ಕಾರ್ಮೋಡ ಆವರಿಸಿದ್ದು, ರಾಷ್ಟ್ರದೆಲ್ಲೆಡೆ ದಿನಬಳಕೆಯ ಆಹಾರ ವಸ್ತುಗಳು ಈಗಾಗಲೇ ಗಗನಕ್ಕೇರಿವೆ.

ಉತ್ಪಾದನಾ ಸಾಮರ್ಥ್ಯವು ಈಗ ಅಪಾಯದಲ್ಲಿದ್ದು, ಆಗಸ್ಟ್ ಮಾಸಾಂತ್ಯ ಮತ್ತು ಸೆಪ್ಟೆಂಬರ್ ಆರಂಭದಲ್ಲಿನ ಮಳೆಯು ದೇಶದ ಉತ್ತರ ಮತ್ತು ಕೇಂದ್ರ ಭಾಗಗಳಿಗೆ ಅವಶ್ಯಕವಾಗಿದೆ ಎಂದು ವರದಿ ತಿಳಿಸಿತ್ತು.

ಭತ್ತ ಬೆಳೆಯುವ ಬಹುತೇಕ ಕಡೆ ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬೀಳುವ ಸಾಧ್ಯತೆಗಳಿವೆ. ಆದರೂ ಅದರ ಪ್ರಮಾಣವು ಕಡಿಮೆಯಿರಬಹುದು. ಇದರ ಪರಿಣಾಮ ಉತ್ಪಾದನೆಯಲ್ಲಿ ಕಡಿತವಾಗುವುದು ಖಚಿತ ಎಂದೂ ಹೇಳಲಾಗಿತ್ತು.

ಕಳೆದ ವರ್ಷದ ಇದೇ ಅವಧಿಯಲ್ಲಿ 256.76 ಲಕ್ಷ ಹೆಕ್ಟೇರುಗಳಲ್ಲಿದ್ದ ಭತ್ತದ ಬೆಳೆಯು ಈ ಬಾರಿ ಜುಲೈ 30ರ ಅವಧಿಗೆ 191.30 ಲಕ್ಷ ಹೆಕ್ಟೇರುಗಳಿಗಿಳಿದಿರುವ ಬಗ್ಗೆಯೂ ಗಮನ ಸೆಳೆಯಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ