ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಾರ್ವಜನಿಕ ಸ್ವಾಮ್ಯ ಸಂಸ್ಥೆಗಳಿಂದ 1846 ಕೋಟಿ ಅಕ್ರಮ (CAG, irregularity | Heavy Industries and Public Enterprises | Vilasrao Deshmukh | Rajya Sabha)
 
ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು 1,846.5 ಕೋಟಿ ರೂಪಾಯಿಗಳ ಅಕ್ರಮ ನಡೆಸಿವೆ ಎಂದು ಕೇಂದ್ರೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು (ಸಿಎಜಿ) ತಮ್ಮ 2009-10ನೇ ಸಾಲಿನ ವರದಿಯಲ್ಲಿ ತಿಳಿಸಿದ್ದಾರೆಂದು ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಸಚಿವ ವಿಲಾಸರಾವ್ ದೇಶ್‌ಮುಖ್ ತಿಳಿಸಿದ್ದಾರೆ.

2007ರ ವರದಿಯಲ್ಲಿ 4547.63 ಕೋಟಿ, 2008ರಲ್ಲಿ 1404.32 ಕೋಟಿ ರೂಪಾಯಿಗಳ ಅಕ್ರಮ ನಡೆಸಿರುವುದನ್ನು ಮಹಾಲೇಖ ಪಾಲರು ತನ್ನ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ ಎಂದು ರಾಜ್ಯಸಭೆಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಚಿವರು ವಿವರಿಸಿದರು.

ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಈ ಹಣಕಾಸಿನ ಕೊರತೆಗಳಿಗೆ ಕಾರಣಗಳನ್ನೂ ಸಿಎಜಿ ನೀಡಿದೆ ಎಂದು ದೇಶ್‌ಮುಖ್ ತಿಳಿಸಿದ್ದಾರೆ.

ಸಿಎಜಿ ವರದಿಯ ಪ್ರಕಾರ ಎಲ್ಲವನ್ನೂ ಪರಿಣಾಮಕಾರಿ ಪರಿಶೀಲನೆ ನಡೆಸಲು ಮತ್ತು ತ್ವರಿತಗತಿಯಲ್ಲಿ ಕಾರ್ಯೋನ್ಮುಖವಾಗುವಂತೆ ಮಾಡಲು ಎಲ್ಲಾ ಸಚಿವಾಲಯಗಳ ಆಡಳಿತ ಅಥವಾ ಇಲಾಖೆಗಳಲ್ಲಿ ವಿಚಕ್ಷಣಾ ದಳವನ್ನು ಸ್ಥಾಪಿಸಲಾಗುತ್ತದೆ ಎಂದರು.

ಸಂಬಂಧಪಟ್ಟ ಸಚಿವಾಲಯದ ಆಡಳಿತ ಅಥವಾ ಇಲಾಖೆಯು ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲನೆಗಾಗಿ ಸಿಎಜಿ ಕಚೇರಿಗೆ ಮಾಹಿತಿ ನೀಡಬೇಕು ಎಂಬುದನ್ನೂ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ