ವಿದೇಶಿ ಮಾರುಕಟ್ಟೆಯಲ್ಲಿನ ದುರ್ಬಲ ಗತಿಯನ್ನನುಸರಿಸಿದ ದಾಸ್ತಾನುದಾರರು ಮಾರಾಟಕ್ಕೆ ಒತ್ತು ನೀಡಿದ ಕಾರಣ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಕುಸಿತ ದಾಖಲಿಸಿದೆ.
ಬೆಳ್ಳಿ ದರದಲ್ಲೂ ಕುಸಿತ ದಾಖಲಾಗಿದೆ. ಕಳೆದ ಮೂರು ದಿನಗಳಿಂದ ಹೆಚ್ಚಳ ಕಂಡು ಬಂದಿದ್ದರೂ, ಕೈಗಾರಿಕಾ ವಲಯದಿಂದ ಬೇಡಿಕೆ ಕಡಿಮೆಯಾದ ಕಾರಣ ಕುಸಿತ ಅನುಭವಿಸಬೇಕಾಯಿತು.
ಕಳೆದ ಏಳು ವಾರಗಳ ಗರಿಷ್ಠ ಮಟ್ಟದಿಂದ ಕೆಳಕ್ಕಿಳಿದ ಚಿನ್ನದ ಬೆಲೆಯು ಯೂರೋಪ್ ಮಾರುಕಟ್ಟೆಯಲ್ಲಿ ಪ್ರತೀ ಔನ್ಸ್ಗೆ 955 ಡಾಲರುಗಳನ್ನು ದಾಖಲಿಸಿದೆ. ಕರೆನ್ಸಿ ಮಾರುಕಟ್ಟೆ, ಏರುತ್ತಿರುವ ಕಚ್ಚಾ ತೈಲ ಬೆಲೆ ಮತ್ತು ಶೇರು ಮಾರುಕಟ್ಟೆಗಳತ್ತ ವ್ಯವಹಾರಸ್ಥರು ದೃಷ್ಟಿ ಹಾಯಿಸಿದ್ದಾರೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಸಿದ್ಧ ಚಿನ್ನವು ನ್ಯೂಯಾರ್ಕ್ನಲ್ಲಿ 953.70 ಡಾಲರುಗಳನ್ನು ಪ್ರತೀ ಔನ್ಸ್ಗಳಿಗೆ ದಾಖಲಿಸಿದೆ. ಸೋಮವಾರ ಇದು 955.55 ಡಾಲರುಗಳಾಗಿತ್ತು.
ಪ್ರತೀ ಔನ್ಸ್ ಬೆಳ್ಳಿಗೆ 14.21 ಡಾಲರ್ ದಾಖಲಿಸಿದ್ದ ಮಾರುಕಟ್ಟೆ ಇಂದು 14.12 ಡಾಲರುಗಳಿಗೆ ಕುಸಿತ ಕಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಉತ್ಕೃಷ್ಟ ಚಿನ್ನದ ದರವು ಪ್ರತೀ 10 ಗ್ರಾಂಗಳಲ್ಲಿ 40 ರೂಪಾಯಿಗಳ ಕುಸಿತ ಕಂಡಿದ್ದು, 14,810 ರೂಪಾಯಿಗಳನ್ನು ಮುಟ್ಟಿದೆ. ನಿನ್ನೆ ಇದು 14,850 ರೂಪಾಯಿಗಳಾಗಿದ್ದವು.
ಶುದ್ಧ ಚಿನ್ನ ದರವೂ ಇದೇ ಮಟ್ಟದ ಕುಸಿತಕ್ಕೆ ಸಾಕ್ಷಿಯಾಯಿತು. ನಿನ್ನೆ 14,920 ರೂಪಾಯಿಗಳನ್ನು ಈ ವಿಭಾಗ ಹೊಂದಿದ್ದರೆ, ಇಂದು 14,880 ರೂಪಾಯಿಗಳನ್ನು ದಾಖಲಿಸಿದೆ.
ಸಿದ್ಧ ಬೆಳ್ಳಿಯು ಪ್ರತೀ ಕಿಲೋವೊಂದರಲ್ಲಿ 120 ರೂಪಾಯಿಗಳನ್ನು ಕಳೆದುಕೊಂಡಿದೆ. ಕಿಲೋವೊಂದಕ್ಕೆ 23,115 ರೂಪಾಯಿಗಳಿದ್ದ ಬೆಳ್ಳಿ ದರವು ಇಂದು 22,995 ರೂಪಾಯಿಗಳಿಗೆ ವ್ಯವಹರಿಸಿದೆ.