ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗುರುವಾರ, ಶುಕ್ರವಾರ ಬ್ಯಾಂಕ್ ನೌಕರರ ಮುಷ್ಕರ (Bank employee | strike | AIBOA | UFBU)
 
ವೇತನ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳ ಸಂಬಂಧ ಸರಕಾರದ ಜತೆಗಿನ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಗುರುವಾರ ಮತ್ತು ಶುಕ್ರವಾರ ದೇಶದಾದ್ಯಂತ ಮುಷ್ಕರ ನಡೆಸಲಿದ್ದಾರೆ.

ಸರಕಾರದ ಪರವಾಗಿ ಭಾರತೀಯ ಬ್ಯಾಂಕ್ ಸಂಘದ (ಐಬಿಎ) ಜತೆ ನಡೆಸಿದ ಮಾತುಕತೆ ಮತ್ತೆ ವಿಫಲವಾಗಿದೆ. ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಮುಂದಿರಿಸಿದ ಬೇಡಿಕೆಗಳನ್ನು ಐಬಿಎ ಒಪ್ಪಿಕೊಳ್ಳದ ಕಾರಣ ಮುಷ್ಕರ ನಡೆಸಲಿದ್ದೇವೆ ಎಂದು ಯೂನಿಯನ್ ತಿಳಿಸಿದೆ.

"ನಾವು ಮುಷ್ಕರ ನಿರ್ಧಾರವನ್ನು ಬದಲಾಯಿಸುವುದಿಲ್ಲ" ಎಂದು ಯುಎಫ್‌ಬಿಯು ಸಂಚಾಲಕ ಸಿ.ಎಚ್. ವೆಂಕಟಾಚಲಮ್ ತಿಳಿಸಿದ್ದಾರೆ.

ಐಬಿಎ ಪ್ರಸ್ತಾವಿತ ವೇತನ ಹೆಚ್ಚಳದ ಪ್ರಮಾಣ ಶೇ.17.5ನ್ನು ಶೇ.13ಕ್ಕಿಳಿಸಿರುವುದು ಕೂಡ ಯುಎಫ್‌ಬಿಯು ಕಳವಳಕ್ಕೆ ಕಾರಣವಾಗಿದೆ. ಸಾವನ್ನಪ್ಪಿದವರ ಅಥವಾ ಕೆಲಸ ಮಾಡಲಾಗದ ಸ್ಥಿತಿಯಲ್ಲಿರುವವರ ಸಂಬಂಧಿಕರಿಗೆ ಉದ್ಯೋಗ ನೀಡುವ ಬೇಡಿಕೆಯನ್ನೂ ಸರಕಾರ ಒಪ್ಪಿಕೊಂಡಿಲ್ಲ.

ಪ್ರಸಕ್ತ ಪಿಎಫ್ ವ್ಯವಸ್ಥೆಯಲ್ಲಿರುವ ನೌಕರರಿಗೂ ಪಿಂಚಣಿ ಯೋಜನೆಯನ್ನು ವಿಸ್ತರಿಸಲಾಗುತ್ತದೆಯೆಂಬ ಈ ಹಿಂದಿನ ನಿರ್ಧಾರದಿಂದಲೂ ಐಬಿಎ ಹಿಂದಕ್ಕೆ ಸರಿದಿದೆ ಎಂದೂ ವೆಂಕಟಾಚಲಂ ತಿಳಿಸಿದ್ದಾರೆ.

ದೇಶದಾದ್ಯಂತದ ಬ್ಯಾಂಕ್ ನೌಕರರ ಸಂಘಟನೆಗಳ ಒಂಬತ್ತು ಸಂಘಟನೆಗಳ ಮಾತೃ ಸಂಘಟನೆಯಾಗಿರುವ ಯುಎಫ್‌ಬಿಯು ಸಾರ್ವಜನಿಕ, ಖಾಸಗಿ ಹಾಗೂ ವಿದೇಶಿ ಬ್ಯಾಂಕುಗಳ ನೌಕರರ ಸದಸ್ಯತ್ವವನ್ನು ಹೊಂದಿದೆ.

ಇದೀಗ ನಡೆಸಲುದ್ದೇಶಿಸಿರುವ ಗುರುವಾರ ಮತ್ತು ಶುಕ್ರವಾರದ ಮುಷ್ಕರದಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟು 10 ಲಕ್ಷ ನೌಕರರು ಭಾಗವಹಿಸಲಿದ್ದಾರೆ. ದೇಶದಾದ್ಯಂತದ 60 ಸಾವಿರ ಬ್ಯಾಂಕ್ ಶಾಖೆಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಯುಎಫ್‌ಬಿಯು ತಿಳಿಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ