ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕಾದಲ್ಲಿ 13.1 ಲಕ್ಷ ಮಂದಿಯಿಂದ ದಿವಾಳಿ ಅರ್ಜಿ (US | bankrupt | Lehman Brothers | Finance)
 
2009ರ ಜೂನ್‌ಗೆ ಅಂತ್ಯಗೊಂಡ ಮೂರನೇ ತ್ರೈಮಾಸಿಕ ಅವಧಿಯವರೆಗೆ ಅಮೆರಿಕಾದಲ್ಲಿ 13.1 ಲಕ್ಷ ಮಂದಿ ದಿವಾಳಿಯಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ ನಂತರ ಶೇ.85ರಷ್ಟು ಅರ್ಜಿಗಳು ಬಂದಿವೆ ಎಂದು ವರದಿಗಳು ತಿಳಿಸಿವೆ.

ಕಳೆದ 80 ವರ್ಷಗಳಲ್ಲೇ ಅತೀ ಸಂಕಷ್ಟಕ್ಕೆ ಸಿಲುಕಿರುವ ಈ ಆರ್ಥಿಕ ನಷ್ಟವನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಶೇ.35ರಷ್ಟು ಹೆಚ್ಚಳ ಕಂಡು ಬಂದಿದೆ.

2008ರ ಜೂನ್ 30ಕ್ಕೆ ಅಂತ್ಯಗೊಂಡಿದ್ದ ವರ್ಷದಲ್ಲಿ ದಿವಾಳಿಗೊಂಡವರ ಸಂಖ್ಯೆ 967,831 ಆಗಿತ್ತು ಎಂದು ಅಮೆರಿಕಾ ನ್ಯಾಯಾಲಯಗಳ ಆಡಳಿತ ಕಚೇರಿ ತಿಳಿಸಿದೆ.

2008ರ ಸೆಪ್ಟೆಂಬರ್‌ನಲ್ಲಿ ಆರ್ಥಿಕ ಸೇವೆಯ ಬಹುದೊಡ್ಡ ಸಂಸ್ಥೆ ಲೆಹ್ಮನ್ ಬ್ರದರ್ಸ್ ದಿವಾಳಿಯೆಂದು ಘೋಷಿಸಿದ ನಂತರ ಜೂನ್‌ವರೆಗೆ 11 ಲಕ್ಷ ದಿವಾಳಿ ಅರ್ಜಿಗಳು ಬಂದಿವೆ.

2008ರ ಜೂನ್ 30ಕ್ಕೆ ಕೊನೆಗೊಂಡ ವರ್ಷದಲ್ಲಿ 934,009ರಲ್ಲಿದ್ದ ವ್ಯವಹಾರೇತರ ದಿವಾಳಿ ಅರ್ಜಿಗಳು ಜೂನ್ 30, 2009ರಲ್ಲಿ ಅಂತ್ಯಗೊಂಡ 12 ತಿಂಗಳುಗಳ ಅವಧಿಗೆ ಶೇ.34ರಷ್ಟು ಹೆಚ್ಚಳವಾಗಿ 1,251,294ನ್ನು ತಲುಪಿವೆ.

ಇದೇ ಅವಧಿಯಲ್ಲಿ ವ್ಯವಹಾರ ಆಧರಿತ ದಿವಾಳಿ ಪ್ರಕರಣಗಳಲ್ಲಿ ಈ ಹಿಂದಿನ ವರ್ಷಕ್ಕಿಂತ ಶೇ.63ರ ಏರಿಕೆ ದಾಖಲಾಗಿದೆ. ಜೂನ್ 2009ಕ್ಕೆ ಅಂತ್ಯಗೊಂಡ ವರ್ಷದಲ್ಲಿ 55,021 ಪ್ರಕರಣಗಳು ಕಂಡು ಬಂದಿವೆ.

ಕಳೆದ 11 ತಿಂಗಳುಗಳಿಂದ ಅಮೆರಿಕಾದಲ್ಲಿನ ವಾಷಿಂಗ್ಟನ್ ಮೂಚ್ಯುವಲ್, ಕಾರು ತಯಾರಿಕಾ ಸಂಸ್ಥೆಗಳಾದ ಜನರಲ್ ಮೋಟಾರ್ಸ್ ಮತ್ತು ಕ್ರಿಸ್ಲರ್ ಮುಂತಾದ ಆರ್ಥಿಕ ದಿಗ್ಗಜರುಗಳು ಹಣಕಾಸು ಸಂಕಷ್ಟಕ್ಕೀಡಾಗಿದ್ದವು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ