ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2010ರೊಳಗೆ 3,500 ಉದ್ಯೋಗ: ಬರೋಡಾ ಬ್ಯಾಂಕ್ (BoB | Bank of Baroda | India | Bank)
 
ಸಾರ್ವಜನಿಕ ಸ್ವಾಮ್ಯದ ಮೂರನೇ ಅತಿ ದೊಡ್ಡ ಬ್ಯಾಂಕ್ ಎಂದು ಖ್ಯಾತಿ ಪಡೆದಿರುವ 'ಬ್ಯಾಂಕ್ ಆಫ್ ಬರೋಡಾ' ಪ್ರಸಕ್ತ ಹಣಕಾಸು ವರ್ಷದಲ್ಲಿ ಅಧಿಕಾರಿಗಳು ಸೇರಿದಂತೆ 3,500 ನೌಕರರನ್ನು ನೇಮಕ ಮಾಡಿಕೊಳ್ಳುವ ಯೋಚನೆಯಲ್ಲಿದೆ.

1,000 ಪರೀಕ್ಷಾರ್ಥ ಅಧಿಕಾರಿಗಳು ಹಾಗೂ 2,000 ಗುಮಾಸ್ತರು ಸೇರಿದಂತೆ 2010ರ ಮಾರ್ಚ್ ಒಳಗೆ ಒಟ್ಟು 3,500 ನೌಕರರನ್ನು ನಾವು ನೇಮಕಾತಿ ಮಾಡಿಕೊಳ್ಳಲಿದ್ದೇವೆ ಎಂದು ಬ್ಯಾಂಕ್ ಆಫ್ ಬರೋಡಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಮಲ್ಯ ತಿಳಿಸಿದ್ದಾರೆ.
PR


ಇದಲ್ಲದೆ ಬ್ಯಾಂಕ್ ಕ್ಯಾಂಪಸ್ ನೇಮಕಾತಿಗೂ ಒತ್ತು ನೀಡಲಿದೆ. ನಾವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಐಐಎಂ ಮತ್ತು ಐಐಟಿಗಳಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದೇವೆ ಎಂದು ಅವರು ವಿವರ ನೀಡಿದರು.

ಪ್ರಸಕ್ತ ವರ್ಷದಲ್ಲಿ 200 ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಹಾಗೂ ಇಂಜಿನಿಯರ್‌ಗಳನ್ನು ನಾವು ನೇಮಕ ಮಾಡಿಕೊಳ್ಳಲಿದ್ದೇವೆ. ಇಷ್ಟೇ ಅಲ್ಲದೆ 250 ಕೃಷಿ ಅಧಿಕಾರಿಗಳನ್ನು ಕೂಡ ಬ್ಯಾಂಕ್ ತನ್ನ ನೌಕರರ ಪಟ್ಟಿಗೆ ಸೇರಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.

ತನ್ನ ವ್ಯವಹಾರವನ್ನು ವಿಸ್ತರಿಸುವ ಯೋಜನೆ ರೂಪಿಸಿರುವ ಬ್ಯಾಂಕ್ ಆಫ್ ಬರೋಡಾ, ಬ್ರಿಟನ್ ಮೂಲದ 'ಲೀಗಲ್ ಎಂಡ್ ಜನರಲ್ ಗ್ರೂಪ್' ಜತೆ ಇನ್ಸೂರೆನ್ಸ್ ವ್ಯವಹಾರವನ್ನು ಕೂಡ ಆರಂಭಿಸಲಿದೆ.

ನಾವು ಇದಕ್ಕಾಗಿ ಈಗಾಗಲೇ ಆರಂಭಿಕ ಅನುಮತಿ ಪಡೆದುಕೊಂಡಿದ್ದೇವೆ. ಇದರ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಮಲ್ಯ ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ