ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಈ ಬಾರಿ ರೈತರ ಸಾಲಮನ್ನಾ ಮಾಡಲ್ಲ: ಸರಕಾರ (Farm debt waiver | Pranab Mukherjee | Agriculture | UPA)
 
ಕಳೆದ ವರ್ಷದಂತೆ ಈ ಬಾರಿ ರೈತರ ಸಾಲಮನ್ನಾ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ದೇಶದ ನಾಲ್ಕನೇ ಒಂದು ಭಾಗ ಬರಗಾಲ ಪೀಡಿತವಾಗಿರುವ ಹೊತ್ತಿನಲ್ಲಿ ಯುಪಿಎ ಸರಕಾರ ಸ್ಪಷ್ಟಪಡಿಸಿದೆ.

ಸಂಕಷ್ಟದಲ್ಲಿರುವ ರೈತರನ್ನು ಪಾರು ಮಾಡಲು ಸರಕಾರ ಕೃಷಿ ಸಾಲ ಮನ್ನಾ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ವಿತ್ತ ಸಚಿವ ಪ್ರಣಬ್ ಮುಖರ್ಜಿ, 'ಅಂತಹ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ' ಎಂದಿದ್ದಾರೆ.

ಸಾಲ ಮರುಪಾವತಿ ಮಾಡಲಾಗದೆ ಹೊಸ ಸಾಲ ಪಡೆಯಲು ಅನನುಕೂಲತೆ ಅನುಭವಿಸುತ್ತಿದ್ದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಕೈ ಹಿಡಿದ್ದ ಕೇಂದ್ರ ಸರಕಾರವು ಕಳೆದ ವರ್ಷ 71,000 ಕೋಟಿ ರೂಪಾಯಿಗಳಷ್ಟು ಕೃಷಿ ಸಾಲವನ್ನು ಮನ್ನಾ ಮಾಡಿತ್ತು.

ಮಳೆ ವೈಫಲ್ಯದ ಸಂಪೂರ್ಣ ಪರಿಣಾಮವನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದಿರುವ ಸಚಿವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶವು ಶೇ.6ರ ಆರ್ಥಿಕ ಪ್ರಗತಿಯನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದ ದೇಶೀಯ ಉತ್ಪಾದನಾ ದರದಲ್ಲಿ ಕೃಷಿ ಕ್ಷೇತ್ರವು ಐದನೇ ಒಂದು ಭಾಗವನ್ನು ಹೊಂದಿದೆ. ಆದರೆ ಮಳೆ ಅಭಾವದಿಂದಾಗಿ ಕೃಷ್ಯುತ್ಪನ್ನಗಳಲ್ಲಿ ತೀವ್ರತರದ ಕುಂಠಿತ ಎದುರಾಗಲಿದ್ದು, ರೈತರ ಜತೆ ಇತರರೂ ಸಂಕಷ್ಟಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಶೇ.9ರ ಆರ್ಥಿಕ ಪ್ರಗತಿ ದರವನ್ನು ಹೊಂದಿದ್ದ ದೇಶವು, 2009ರ ಆರ್ಥಿಕ ವರ್ಷದಲ್ಲಿ ಪ್ರಮುಖವಾಗಿ ಜಾಗತಿ ಆರ್ಥಿಕ ಹಿಂಜರಿತದಿಂದಾಗಿ ಶೇ.6.7ಕ್ಕೆ ಕುಸಿತ ಕಂಡಿತ್ತು. ಇದೀಗ ಬರಗಾಲ ಕೂಡ ಕಾಡುತ್ತಿರುವುದರಿಂದ ಮತ್ತಷ್ಟು ಸಮಸ್ಯೆಗಳು ಎದುರಾಗಬಹುದು ಎಂದು ನಿರೀಕ್ಷಿಸಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ