ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಲಂಡನ್‌ನಲ್ಲಿ 'ರೋಡ್ ಶೋ' ನಡೆಸಲಿರುವ ಕಮಲನಾಥ್ (roadshow | London | Kamal Nath | highway)
 
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಇತರೆಲ್ಲ ದೇಶಗಳಿಗಿಂತ ಹೆಚ್ಚು ರಸ್ತೆ ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ಕಮಲನಾಥ್, ಬ್ರಿಟೀಷ್ ಹೂಡಿಕೆದಾರರನ್ನು ಭಾರತದತ್ತ ಸೆಳೆಯಲು ಇಂಗ್ಲೆಂಡ್‌ನಲ್ಲಿ ಸೆಪ್ಟೆಂಬರ್ ಆರಂಭದಲ್ಲಿ 'ರೋಡ್ ಶೋ' ನಡೆಸಲಿದ್ದಾರೆ.

ಬ್ರಿಟನ್ ಉದ್ಯಮಿಗಳು, ಬ್ಯಾಂಕುದಾರರು ಮತ್ತು ಹೂಡಿಕೆದಾರರ ಜತೆ ಸೆಪ್ಟೆಂಬರ್ 1ರಿಂದ 2ರವರೆಗೆ ಎರಡು ದಿನಗಳ ಕಾಲ ಲಂಡನ್‌ನಲ್ಲಿ ಕಳೆಯಲಿರುವ ಕಮಲನಾಥ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ರಸ್ತೆಗಳಿಗಾಗಿ ಹಣ ಹೂಡಿಕೆ ಮಾಡಲು ಮನವೊಲಿಸಲಿದ್ದಾರೆ.

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಪ್ರತೀ ದಿನ 20 ಕಿಲೋ ಮೀಟರ್‌ಗಳಂತೆ 35,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಯೋಜನೆಯನ್ನು ಭಾರತ ಹೊಂದಿದೆ. 2009-10ರ ಸಾಲಿನಲ್ಲೇ 15,000 ಕಿ.ಮೀ. ರಸ್ತೆ ನಿರ್ಮಾಣ ಮಾಡುವ ತಯಾರಿಯನ್ನು ಸಚಿವಾಲಯ ನಡೆಸಿದೆ.

ಆದರೆ ಪ್ರಸಕ್ತ ಅಂಕಿ-ಅಂಶಗಳ ಪ್ರಕಾರ ದಿನವೊಂದಕ್ಕೆ ಕೇವಲ ಮೂರು ಕಿಲೋ ಮೀಟರ್ ರಸ್ತೆಯಷ್ಟೇ ನಿರ್ಮಾಣವಾಗುತ್ತಿದೆ. ಇದನ್ನು ಚುರುಕುಗೊಳಿಸುವ ಭರವಸೆ ಸಚಿವರದ್ದು.

ಭಾರತದ ರಸ್ತೆಗಳ ಮೇಲೆ ಹಣ ಹೂಡಿಕೆ ಮಾಡುವುದರಿಂದ 70 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚು ವ್ಯವಹಾರ ನಡೆಯಲಿದ್ದು, ಇದು ಖಾಸಗಿ ವಲಯದಿಂದ ಹರಿದು ಬರುವ ಅರ್ಧದಷ್ಟು ಮಾತ್ರ ಎಂದು ಬ್ರಿಟನ್ ಮತ್ತು ಪಾಶ್ಚಾತ್ಯ ದೇಶಗಳ ಉದ್ಯಮ ವಲಯದಲ್ಲಿ ಜನಪ್ರಿಯ ವ್ಯಕ್ತಿತ್ವ ಹೊಂದಿರುವ ಕಮಲನಾಥ್ ವಿವರಿಸುವ ನಿರೀಕ್ಷೆಗಳಿವೆ.

ಕಮಲನಾಥ್ ಜತೆ ಭಾರತೀಯ ಉದ್ಯಮ ಕ್ಷೇತ್ರದ ಪ್ರಮುಖರಾದ ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಗುಲಾಬ್ಚಂದ್, ಫೀಡ್‌ಬ್ಯಾಕ್ ವೆಂಚರ್ಸ್ ಅಧ್ಯಕ್ಷ ವಿನಾಯಕ್ ಚಟರ್ಜಿ ಹಾಗೂ ಜೆಸಿಬಿ ಇಂಜಿಯಾ ವ್ಯವಸ್ಥಾಪಕ ನಿರ್ದೇಶಕ ವಿಪಿನ್ ಸೋಂದಿ ಬ್ರಿಟನ್ ಪ್ರಯಾಣ ಬೆಳೆಸಲಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ