ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸತತ ಮೂರನೇ ದಿನವೂ ಬೆಳ್ಳಿ ಕುಸಿತ; ಚಿನ್ನ ಸ್ಥಿರ (Gold | Silver | Bullion | Stockist)
 
ಸತತ ಮೂರನೇ ದಿನವೂ ಕುಸಿತವನ್ನು ಮುಂದುವರಿಸಿರುವ ಬೆಳ್ಳಿ ದರ ಬುಧವಾರವೂ ಪ್ರತೀ ಕಿಲೋವೊಂದರಲ್ಲಿ 200 ರೂಪಾಯಿಗಳನ್ನು ಕಳೆದುಕೊಂಡು 23,000 ರೂಪಾಯಿಗಳನ್ನು ತಲುಪಿದೆ. ಆದರೆ ಚಿನ್ನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದಾಸ್ತಾನುದಾರರು ತಮ್ಮ ಮಾರಾಟ ಮಾಡುವ ಪ್ರವೃತ್ತಿಯನ್ನು ಮುಂದುವರಿಸಿದ ಕಾರಣ ಈ ಬೆಳವಣಿಗೆಗಳಾಗಿವೆ. ಆ ಹೊತ್ತಿಗೆ ಕೈಗಾರಿಕಾ ಘಟಕಗಳು ಖರೀದಿಗೆ ಬೆಂಬಲ ಸೂಚಿಸಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ದುರ್ಬಲ ನಡೆಯನ್ನು ಕಂಡು ನಾಣ್ಯ ತಯಾರಕರು ಕೂಡ ಹಿಂದಕ್ಕೆ ಸರಿದರು. ಇವೆಲ್ಲ ಕಾರಣಗಳಿಂದಾಗಿ ಬೆಳ್ಳಿ ದರ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ವಿವರಿಸಿದ್ದಾರೆ.

ವಿದೇಶಿ ಮಾರುಕಟ್ಟೆಯಲ್ಲಿ ಬೆಳ್ಳಿ ದರವು ಶೇ.3ರಷ್ಟು ಕಡಿಮೆ ಬೆಲೆಯಲ್ಲಿ ವ್ಯವಹಾರ ನಡೆಸಿತು. ಪ್ರತೀ ಔನ್ಸ್ ಬೆಳ್ಳಿ ದರ ಕೇವಲ 13.58 ಡಾಲರುಗಳಾಗಿದ್ದವು.

ಅದೇ ಹೊತ್ತಿಗೆ ಚಿನ್ನ ಯಾವುದೇ ಬದಲಾವಣೆಗಳನ್ನು ಕಾಣದೆ 10 ಗ್ರಾಂಗಳಿಗೆ 15,100 ರೂಪಾಯಿಗಳಲ್ಲೇ ಮುಂದುವರಿದಿದೆ. ಮದುವೆ ಸಮಾರಂಭಗಳ ಹಿನ್ನಲೆಯಲ್ಲಿ ಖರೀದಿ ಭರಾಟೆ ಅಲ್ಪ ಪ್ರಮಾಣದಲ್ಲಿ ಕಂಡು ಬಂದ ಕಾರಣ ಇಲ್ಲಿ ಸ್ಥಿರತೆ ಕಂಡು ಬಂದಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಪೂರಕ ವಾತಾವರಣಗಳಿಲ್ಲದ ಹೊರತಾಗಿಯೂ ಇಲ್ಲಿ ಯಾವುದೇ ಬದಲಾಣೆಗಳಾಗಿಲ್ಲ.

ಮಂಗಳವಾರ ರಾತ್ರಿ ನ್ಯೂಯಾರ್ಕ್‌‌ನಲ್ಲಿ ಚಿನ್ನ ದರ 941 ಡಾಲರುಗಳಿಗೆ ಏರಿಕೆ ಕಂಡಿತ್ತು. ಆದರೆ ಇಂದು ಲಂಡನ್‌ನಲ್ಲಿ 932.55 ಡಾಲರುಗಳಲ್ಲಿ ವ್ಯವಹಾರ ಆರಂಭಿಸಿದೆ. ಅಮೆರಿಕಾ ಡಾಲರು ಚೇತರಿಸಿಕೊಳ್ಳುವ ಲಕ್ಷಣಗಳಿವು ಎಂದು ಹೇಳಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ