ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಸ್‌ಎನ್‌ಎಲ್‌ ನೌಕರರ ಮುಷ್ಕರ ಎರಡನೇ ದಿನಕ್ಕೆ (BSNL | employees Strike | Telecom | India)
 
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಎಸ್‌ಎನ್‌ಎಲ್‌ನ 12,000ಕ್ಕೂ ಹೆಚ್ಚು 'ಸಿ' ಮತ್ತು 'ಡಿ' ದರ್ಜೆಯ ಗುಜರಾತ್ ವಲಯದ ನೌಕರರು ಗುರುವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ.

'ಸಿ' ಮತ್ತು 'ಡಿ' ದರ್ಜೆಯ 12,000 ನೌಕರರು ಗುಜರಾತ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಸತತ ಎರಡನೇ ದಿನವೂ ಮುಷ್ಕರದಲ್ಲಿ ಪಾಲ್ಗೊಂಡ ಕಾರಣ ದೂರವಾಣಿ ಸಂಪರ್ಕಗಳನ್ನು ವರ್ಗಾಯಿಸುವುದು, ಹೊಸ ಬ್ರಾಡ್‌ಬ್ಯಾಂಡ್ ಮತ್ತು ದೂರವಾಣಿ ಸಂಪರ್ಕಗಳನ್ನು ನೀಡುವುದು ಮುಂತಾದ ಟೆಲಿಕಾಂ ಸೇವೆಗಳು ವ್ಯತ್ಯಯಗೊಂಡಿವೆ ಎಂದು ಗುಜರಾತ್ ವಲಯದ ಬಿಎಸ್‌ಎನ್‌ಎಲ್ ನೌಕರರ ಒಕ್ಕೂಟದ ಅಧ್ಯಕ್ಷ ಎನ್.ಕೆ. ತ್ರಿವೇದಿ ತಿಳಿಸಿದ್ದಾರೆ.

ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆ, ಭಡ್ತಿ ನೀತಿಯಲ್ಲಿ ಬದಲಾವಣೆ ಮತ್ತು ವೇತನ ಸಂಬಂಧಿ ಅಸಂಗತತೆಯನ್ನು ಹಿಂದಕ್ಕೆ ಪಡೆಯುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟಿರುವ ಸಿ ಮತ್ತು ಡಿ ದರ್ಜೆ ವ್ಯಾಪ್ತಿಯ ದೂರವಾಣಿ ತಂತ್ರಜ್ಞರು, ದೂರವಾಣಿ ಕಚೇರಿ ಹಿರಿಯ ಸಹಾಯಕ, ಸಾಮಾನ್ಯ ಕಾರ್ಮಿಕರು ಮತ್ತು ಇತರರು ಮುಷ್ಕರ ನಡೆಸುತ್ತಿದ್ದಾರೆ ಎಂದು ಅವರು ನುಡಿದರು.

ಗುಜರಾತ್ ವಲಯದಲ್ಲಿರುವ ಸಿ ಮತ್ತು ಡಿ ವಲಯದ ಉದ್ಯೋಗಿಗಳ ಸಂಖ್ಯೆ 20,000. ಅವರಲ್ಲಿ ಸುಮಾರು 8,000 ನೌಕರರು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಹೊತ್ತಿಗೆ ಪ್ರತಿಕ್ರಿಯೆ ನೀಡಿರುವ ಗುಜರಾತ್ ವಲಯದ ಪ್ರಧಾನ ವ್ಯವಸ್ಥಾಪಕ ವಿ.ಕೆ. ಸಜ್ನಾನಿ, ನೌಕರರ ಮುಷ್ಕರದಿಂದ ಕಚೇರಿ ವ್ಯವಹಾರಗಳಲ್ಲಿ ಯಾವುದೇ ವ್ಯತ್ಯಯವುಂಟಾಗಿಲ್ಲ. ಕಚೇರಿಗಳಲ್ಲಿ ಗೈರು ಹಾಜರಾತಿ ಕಂಡು ಬಂದಿರುವುದು ನಿಜ. ಸೇವೆಯಲ್ಲಿ ವ್ಯತ್ಯಯವುಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಅವರ ಪ್ರಕಾರ ಸಿ ಮತ್ತು ಡಿ ದರ್ಜೆಯ ಟೆಲಿಕಾಂ ನೌಕರರಲ್ಲಿ ಶೇ.43ರಷ್ಟು ಮಾತ್ರ ಮುಷ್ಕರದಲ್ಲಿ ಕಳೆದೆರಡು ದಿನಗಳಿಂದ ಪಾಲ್ಗೊಂಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ