ಶುಕ್ರವಾರ ಏಷಿಯನ್ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಕುಸಿತ ಕಂಡಿದೆ. ಇಂಧನದ ದುರ್ಬಲ ಬೇಡಿಕೆಯ ಹೊರತಾಗಿಯೂ ಆರ್ಥ ವ್ಯವಸ್ಥೆ ಸುಧಾರಣೆಯತ್ತ ಸಾಗುತ್ತಿರುವುದನ್ನು ಮುಂದುವರಿಸಿದ್ದು, ಪ್ರತೀ ಬ್ಯಾರೆಲ್‌ಗೆ 72 ಡಾಲರುಗಳಿಗಿಂತ ಹೆಚ್ಚಿನ ದರವನ್ನು ದಾಖಲಿಸಿದೆ.
ಅಕ್ಟೋಬರ್ ವಿತರಣೆಯ ನ್ಯೂಯಾರ್ಕ್‌ನ ಪ್ರಮುಖ ಒಪ್ಪಂದದಲ್ಲಿ ಪ್ರತೀ ಬ್ಯಾರೆಲ್ ಸಾದಾ ಕಚ್ಚಾ ತೈಲವು 30 ಸೆಂಟ್ಸ್‌ಗಳ ಕುಸಿತ ಕಂಡು 72.61 ಅಮೆರಿಕನ್ ಡಾಲರುಗಳಲ್ಲಿ ಆರಂಭಿಕ ವ್ಯವಹಾರ ನಡೆಸಿದೆ.
ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ಅಕ್ಟೋಬರ್ ವಿತರಣೆಯು 21 ಸೆಂಟ್ಸ್‌ಗಳ ಕುಸಿತದೊಂದಿಗೆ 73.12 ಡಾಲರುಗಳನ್ನು ಮುಟ್ಟಿತು.
ಕಚ್ಚಾ ತೈಲದ ದಾಸ್ತಾನು ಅನಿರೀಕ್ಷಿತ ಕುಸಿತ ಕಂಡಿರುವ ಮಾಹಿತಿಯನ್ನು ಅಮೆರಿಕಾ ಬುಧವಾರ ಬಿಡುಗಡೆ ಮಾಡಿದ್ದರಿಂದ ಬೇಡಿಕೆ ಸುಧಾರಿಸುತ್ತಿದೆ. ಆದರೆ ತೈಲ ಬೆಲೆ ಮತ್ತಷ್ಟು ಕುಸಿತದತ್ತ ಸಾಗದು ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಆದರೆ ಜಾಗತಿಕ ಕಚ್ಚಾ ತೈಲದ ದಾಸ್ತಾನು ಈಗಲೂ ಸಾಕಷ್ಟಿದೆ. ಹಾಗಾಗಿ ಬೆಲೆಯೇರಿಕೆ ಮುಂದುವರಿಯಲಿದೆ ಎಂದು ಅವರು ವಿವರಿಸಿದರು.
ಅಮೆರಿಕಾದ ವರದಿಯು ಧನಾತ್ಮಕ ಅಂಶಗಳನ್ನು ಉಳಿಸಿಕೊಂಡಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಲು ಪರದಾಟ ಕಾಣುತ್ತಿದೆ ಎಂದು ಆಸ್ಟ್ಟೇಲಿಯಾದ ಕಾಮನ್‌ವೆಲ್ತ್ ಬ್ಯಾಂಕ್ ತಿಳಿಸಿದೆ.