ಆರ್ಥಿಕ ಪುನರ್ ರಚನೆಯಂಗವಾಗಿ ರಿಯಲ್ ಎಸ್ಟೇಟ್ ಸಾಮರ್ಥ್ಯವನ್ನು ಕುಗ್ಗಿಸಲಿರುವ ಜಾಗತಿಕ ಸಲಹೆಗಾರ ಹಾಗೂ ಹೊರಗುತ್ತಿಗೆ ಸಂಸ್ಥೆ 'ಅಸೆಂಚರ್', ತನ್ನಲ್ಲಿನ ಶೇ.7ರಷ್ಟು ಹಿರಿಯ ಎಕ್ಸಿಕ್ಯೂಟಿವ್‌ಗಳನ್ನು ಕೆಲಸದಿಂದ ತೆಗೆದು ಹಾಕಲಿದೆ.
ಈ ಕ್ರಮದಿಂದಾಗಿ ಆಗಸ್ಟ್ 31ಕ್ಕೆ ಕೊನೆಗೊಳ್ಳಲಿರುವ 2009ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 247 ಮಿಲಿಯನ್ ಡಾಲರ್‌ಗಳ ನಷ್ಟ ಕಂಪನಿ ಅನುಭವಿಸಬೇಕಾಗಬಹುದು ಎಂದು ಲಾಭ ಲೆಕ್ಕ ಹಾಕಲಾಗಿದೆ.
ಜಾಗತಿಕವಾಗಿ ತನ್ನ ಕಚೇರಿಗಳ ನಿರ್ವಹಣೆಯನ್ನು ಕಡಿತಗೊಳಿಸಲು 119 ಮಿಲಿಯನ್ ಡಾಲರ್ ಹಾಗೂ ಉದ್ಯೋಗಿಗಳ ಸಂಖ್ಯೆಯನ್ನು ಇಳಿಕೆಗೊಳಿಸಲು ಇತರ ಹಣ ವೆಚ್ಚವಾಗಬಹುದು ಎಂದು ಕಂಪನಿ ತಿಳಿಸಿದೆ.
ಶೇ.7ರಷ್ಟು ಹಿರಿಯ ಎಕ್ಸಿಕ್ಯೂಟಿವ್‌ಗಳನ್ನು ಸೇವೆಯಿಂದ ಮುಕ್ತಗೊಳಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಶೇ.7 ಅಂದರೆ ಸರಿ ಸುಮಾರು 300ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ಉತ್ಕೃಷ್ಟ ನಿರ್ವಹಣೆ ನೀಡುವ ಭಾಗವಾಗಿ ನಾವು ಇಂತಹ ಕಠಿಣ ಕ್ರಮಗಳಿಗೆ ಮುಂದಾಗಬೇಕಿದೆ. ಇದರಿಂದಾಗಿ ತಕ್ಷಣದ ಹಾಗೂ ಭವಿಷ್ಯದ ಆರ್ಥಿಕ ಸುಧಾರಣೆ ಮತ್ತು ಪ್ರಗತಿಯನ್ನು ನಾವು ಕಂಡುಕೊಳ್ಳಲಿದ್ದೇವೆ ಎಂದು ಅಸೆಂಚರ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕಧಿಕಾರಿ ವಿಲಿಯಂ ಗ್ರೀನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಈ ಸಂಸ್ಥೆಯು 4,800 ಹಿರಿಯ ಎಕ್ಸಿಕ್ಯೂಟಿವ್‌ಗಳನ್ನು ಹೊಂದಿದೆ. ಅಸೆಂಚರ್‌ನಲ್ಲಿರುವ ಒಟ್ಟು ಉದ್ಯೋಗಿಗಳ ಸಂಖ್ಯೆ 1,77,000.