ಬಡ್ಡಿದರಗಳು ಪ್ರಸಕ್ತ ಹೊಂದಿರುವ ಸ್ಥಿರತೆಯನ್ನು ಮುಂದುವರಿಸುವ ಸಾಧ್ಯತೆಗಳಿದ್ದು, ಹಣದುಬ್ಬರ ದರವು ಧನಾತ್ಮಕ ವಲಯಕ್ಕೆ ಮರಳಲಿದೆ ಎಂದು ಎಚ್‌ಡಿಎಫ್‌ಸಿ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೇಕಿ ಮೀಸ್ತ್ರಿ ತಿಳಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಗಳಿವೆ. ನನ್ನ ಪ್ರಕಾರ ಬಡ್ಡಿದರಗಳಲ್ಲಿ ಏರಿಕೆಯಾಗದು. ಏರಿಕೆಯಾಗುವುದಾದರೂ ಅದು ಸದ್ಯದ ಮಟ್ಟಿಗೆ ಘಟಿಸುವ ಸಾಧ್ಯತೆಗಳಿಲ್ಲ ಎಂದು ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.
PR
ಒಂದು ಅವಧಿಯಲ್ಲಿ ಬಹುಶಃ ಬಡ್ಡಿದರ ಆಂಶಿಕ ಏರಿಕೆ ದಾಖಲಿಸಬಹುದು. ಅದು ಕೂಡ ಮುಂದಿನ 6ರಿಂದ 10 ತಿಂಗಳ ನಂತರವಷ್ಟೇ. ಅಲ್ಲೂ ಭಾರೀ ಹೆಚ್ಚಳವಾಗುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ.
ಆರ್ಥಿಕ ಕ್ಷೇತ್ರದ ಖ್ಯಾತ ತಜ್ಞರೂ ಆಗಿರುವ ಕೇಕಿ, ಆಧಾರ ಸ್ತಂಭಗಳು ಪರಿಣಾಮಕಾರಿಯಾಗಿ ಮೂಡಿ ಬಂದ ಕೂಡಲೇ ಹಣದುಬ್ಬರ ಪ್ರಮಾಣ ಏರಿಕೆಯಾಗಬಹುದು ಎಂದರು.
ಈಗಾಗಲೇ ಧನಾತ್ಮಕ ನಡೆಯನ್ನು ಹಣದುಬ್ಬರ ಆರಂಭಿಸಿದೆ. ಈಗಿನಿಂದಲೇ ಹಣದುಬ್ಬರ ದರವು ಏರಿಕೆಯತ್ತ ಚಲನೆಯಲ್ಲಿ ತೊಡಗಿದ್ದು, ಇನ್ನು ಕೆಲ ಸಮಯಗಳಲ್ಲಿ ಹೆಚ್ಚಿನ ಪ್ರಮಾಣವನ್ನು ನಿರೀಕ್ಷಿಸಬಹುದಾಗಿದೆ ಎಂದು ವಿವರಿಸಿದ್ದಾರೆ.
ಕಳೆದ ವರ್ಷ ದಾಖಲಿಸಿದಂತೆ ಈ ವರ್ಷ ಹಣದುಬ್ಬರ ದರ ಶೇ.8 ಅಥವಾ 9ನ್ನು ದಾಖಲಿಸುವುದು ಸಾಧ್ಯವಿಲ್ಲ. ಆದರೆ ಏರಿಕೆಯನ್ನು ದಾಖಲಿಸುವುದಂತೂ ಖಚಿತ ಎಂದು ಅವರು ತಿಳಿಸಿದರು.