ನಿಯೋಜಿತ ಅಧಿಕಾರಿಗಳನ್ನು ಖಾಯಂಗೊಳಿಸುವಂತೆ 10,000ಕ್ಕೂ ಹೆಚ್ಚು ಬಿಎಸ್‌ಎನ್‌ಎಲ್ ಇಂಜಿನಿಯರ್‌ಗಳು ಮೂರು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ದೂರವಾಣಿ ಸಂಪರ್ಕ ಖಾತೆ ಸಚಿವ ಎ. ರಾಜಾ ಸಮಸ್ಯೆಯನ್ನು ನ್ಯಾಯೋಚಿತವಾಗಿ ಪರಿಹರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಶನಿವಾರ ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ.
ಸಚಿವ ರಾಜಾ ಅವರನ್ನು ನಿನ್ನೆ ಇಂಜಿನಿಯರುಗಳ ಅಸೋಸಿಯೇಷನ್‌ನ ಅಧ್ಯಕ್ಷ ಸಿಲೋಹ್ ರಾವ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಆಡಳಿತ ಮಂಡಳಿಯೊಂದಿಗೆ ಶೀಘ್ರದಲ್ಲೇ ತ್ರಿಪಕ್ಷೀಯ ಮಾತುಕತೆಯನ್ನು ಆಯೋಜಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಇಂಜಿನಿಯರ್‌ಗಳ ಅಸೋಸಿಯೇಷನ್‌ನ ವಕ್ತಾರರು ಮಾಹಿತಿ ನೀಡಿದ್ದಾರೆ.
ಸಭೆ ಮುಂದಿನ ವಾರ ನಡೆಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್ ಆಡಳಿತವು ಬಿಎಸ್‌ಎನ್‌ಎಲ್ ಇಂಜಿನಿಯರುಗಳ ಒಕ್ಕೂಟ 'ಅಖಿಲ ಭಾರತ ಪದವೀಧರ ದೂರವಾಣಿ ಅಧಿಕಾರಿಗಳ ಸಂಘಟನೆ' ಜತೆ ಯಾವುದೇ ರೀತಿಯ ಮಾತುಕತೆ ನಡೆಸಲು ನಿರಾಕರಿಸಿತ್ತು.