ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಟಿಎಫ್ ತೆರಿಗೆ ಕಡಿತಕ್ಕೆ ರಾಜ್ಯಗಳಿಂದ ಸ್ಪಷ್ಟ ನಕಾರ (aviation turbine fuel | Air India | ATF | Airlines)
 
ವೈಮಾನಿಕ ಸೇವೆಯ ಶೇ.40ರಷ್ಟನ್ನು ಇಂಧನಕ್ಕಾಗಿಯೇ ವ್ಯಯಿಸುತ್ತಿರುವ ಕಾರಣದಿಂದಾಗಿ, ಎಟಿಎಫ್ ಮೇಲಿನ ತೆರಿಗೆಗಳನ್ನು ರಾಜ್ಯಗಳು ಕಡಿತಗೊಳಿಸಬೇಕೆಂಬ ಬೇಡಿಕೆಯನ್ನಿಟ್ಟ ವಿಮಾನಯಾನ ಸಂಸ್ಥೆಗಳಿಗೆ ನಿರಾಕರಣೆಯ ಸ್ಪಷ್ಟ ಉತ್ತರ ಲಭಿಸಿದೆ.

ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವಿಮಾನಯಾನ ಸಂಸ್ಥೆಗಳು ರಾಜ್ಯಗಳು ವಿಧಿಸುತ್ತಿರುವ ವೈಮಾನಿಕ ಇಂಧನ ದರದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ಮನವಿ ಮಾಡಿದ್ದವು. ಆದರೆ ಇದು ಸಾಧ್ಯವಿಲ್ಲ ಎಂದು ರಾಜ್ಯಗಳು ಶನಿವಾರ ತಿಳಿಸಿವೆ.

ವಿಮಾನಯಾನ ಸಂಸ್ಥೆಗಳ ಬೇಡಿಕೆಯಂತೆ ವೈಮಾನಿಕ ಇಂಧನವನ್ನು ಸರಕು ವಿಭಾಗವೆಂದು ಘೋಷಿಸುವ ಪ್ರಸ್ತಾಪಕ್ಕೂ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ ಎಂದು ಪಶ್ಚಿಮ ಬಂಗಾಲದ ಹಣಕಾಸು ಸಚಿವ ಮತ್ತು ವ್ಯಾಟ್ ಘಟಕದ ಅಧ್ಯಕ್ಷ ಆಸಿಮ್ ದಾಸ್‌ಗುಪ್ತಾ ತಿಳಿಸಿದ್ದಾರೆ.

ಎಟಿಎಫ್‌ನ್ನು ಸರಕು ವಿಭಾಗದಡಿಗೆ ತಂದರೆ ಯಾವುದೇ ರಾಜ್ಯಗಳು ಶೇ.4ಕ್ಕಿಂತ ಹೆಚ್ಚು ತೆರಿಗೆಯನ್ನು ವೈಮಾನಿಕ ಇಂಧನದ ಮೇಲೆ ವಿಧಿಸುವಂತಿಲ್ಲ.

ಪ್ರಸಕ್ತ ವೈಮಾನಿಕ ಇಂಧನದ ಮೇಲಿನ ತೆರಿಗೆಯಲ್ಲಿ ರಾಜ್ಯಗಳು ಭಿನ್ನ ನೀತಿಯನ್ನು ಅನುಸರಿಸುತ್ತಿವೆ. ಆಂಧ್ರ ಪ್ರದೇಶ ಸರಕಾರವು ಶೇ.4ರಷ್ಟು ಮಾತ್ರ ತೆರಿಗೆ ವಿಧಿಸುತ್ತಿದ್ದರೆ, ಇತರ ಕೆಲವು ರಾಜ್ಯಗಳು ಶೇ.30ರವರೆಗೆ ಕರ ವಸೂಲಿ ಮಾಡುತ್ತಿವೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಗಾಗಿ ಅನುಸರಿಸುತ್ತಿರುವ ಕೆಲವು ನೀತಿಯ ಕ್ಲಿಷ್ಟ ವರದಿಯನ್ನು ನಾವು ಕೇಳಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನಮಗೆ ಬಂದಿಲ್ಲ. ಹಾಗಾಗಿ ರಾಜ್ಯಗಳು ಎಟಿಎಫ್ ತೆರಿಗೆಯನ್ನು ಪರಿಷ್ಕರಿಸುವ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ದಾಸ್‌ಗುಪ್ತಾ ತಿಳಿಸಿದ್ದಾರೆ.

ಪ್ರಸಕ್ತ ವೈಮಾನಿಕ ಇಂಧನ ಮೇಲೆ ಆಂಧ್ರ ಪ್ರದೇಶ ಶೇ.4, ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್‌ಗಳು ಶೇ.28ರಿಂದ 30, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಹಿಮಾಚಲ ಪ್ರದೇಶಗಳು ಶೇ.25, ದೆಹಲಿ, ಗೋವಾ, ಹರ್ಯಾಣ, ಜಾರ್ಖಂಡ್, ಚಂಡೀಗಢ ಮತ್ತು ಇತರ ರಾಜ್ಯಗಳು ಶೇ.20, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ನಾಗಾಲ್ಯಾಂಡ್‌ಗಳು ಶೇ.21ರಷ್ಟು ತೆರಿಗೆಯನ್ನು ವಿಧಿಸುತ್ತಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೂನ್ಯ ತೆರಿಗೆಯನ್ನು ಹೊಂದಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ