ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪಾನ್ ಕಡ್ಡಾಯವಿದ್ದರೂ ಹರಿಯುತ್ತಲೇ ಇದೆ ಕಪ್ಪುಹಣ! (PAN | Black economy | I-T department | Money)
 
ಕಳ್ಳ ವ್ಯವಹಾರ ತಡೆಗಟ್ಟುವ ಸಲುವಾಗಿ ಅಧಿಕ ಮೌಲ್ಯದ ವ್ಯವಹಾರಗಳಿಗೆ ಪಾನ್ (ವೈಯಕ್ತಿಕ ಖಾತೆ ಸಂಖ್ಯೆ - ಪಿಎಎನ್) ನಮೂದಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಲಾಗಿದ್ದರೂ, ಇದು ಕಪ್ಪು ಹಣದ ಹರಿವು ತಡೆಯುವಲ್ಲಿ ಅಷ್ಟೇನೂ ಪ್ರಯೋಜನಕಾರಿಯಾಗಿಲ್ಲ ಎಂಬುದನ್ನು ಆದಾಯ ತೆರಿಗೆ ಇಲಾಖೆ ಕಂಡುಕೊಂಡಿದೆ.

ವಾರ್ಷಿಕ ಮಾಹಿತಿ ಲೆಕ್ಕಪತ್ರ (ಎಐಆರ್) ವಿಭಾಗವು ಸರಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ, 2007-08ರ ಸಾಲಿನಲ್ಲಿ 55.7 ಲಕ್ಷ ಕೋಟಿ ರೂಪಾಯಿಗಳಷ್ಟು ಅಧಿಕ ಮೌಲ್ಯದ ವ್ಯವಹಾರ ನಡೆದಿದೆ. ಇದು ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ (27 ಲಕ್ಷ ಕೋಟಿ ರೂ.) ದ್ವಿಗುಣವಾಗಿದೆ. ಆದರೆ ಸುಮಾರು ಶೇ.30 ಅಥವಾ 33 ಲಕ್ಷ ವ್ಯವಹಾರಗಳಲ್ಲಿ 10 ಲಕ್ಷ ವ್ಯವಹಾರಗಳು ಪಾನ್ ಕಾರ್ಡ್ ಇಲ್ಲದೆಯೇ ನಡೆದಿದೆ.

ಹಲವು ಗರಿಷ್ಠ ಮೌಲ್ಯದ ವ್ಯವಹಾರಗಳು ಸಂಶಯಾಸ್ಪದವಾಗಿ ನಡೆದಿದೆ ಎಂದು ಇಲಾಖೆಯು ಪರಿಗಣಿಸಿದೆ. 30 ಲಕ್ಷಕ್ಕಿಂತಲೂ ಹೆಚ್ಚು ಘೋಷಿತ ಮೌಲ್ಯ ಹೊಂದಿರುವ ಆಸ್ತಿ ಮಾರಾಟಗಳನ್ನು ಮಾಡಿದ ಪ್ರಕರಣಗಳಲ್ಲಿ ಅತೀ ಹೆಚ್ಚು ಪಾನ್ ಕಾರ್ಡ್ ಬಳಸದೆ ವ್ಯವಹಾರ ನಡೆಸಲಾಗಿದೆ. ನಾಲ್ಕರಲ್ಲಿ ಒಂದು ಭಾಗದಷ್ಟು ಮಾರಾಟಗಾರರು ಮಾತ್ರ ಪಾನ್ ಕಾರ್ಡ್ ಬಳಸಿದ್ದಾರೆ.

ಅದೇ ರೀತಿ ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಠೇವಣಿ ಇರಿಸಿದವರಲ್ಲಿ ಮೂರನೇ ಎರಡರಷ್ಟು ಮಂದಿ ತಮ್ಮ ಪಾನ್ ಸಂಖ್ಯೆಯನ್ನು ಬ್ಯಾಂಕ್‌ನಲ್ಲಿ ನಮೂದಿಸಿಲ್ಲ. ಅಲ್ಲದೆ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ನಡೆಸುವ ಮಂದಿಯಲ್ಲಿ ಅರ್ಧದಷ್ಟು ಮಂದಿ ಪಾನ್ ಕಾರ್ಡ್ ಬಳಸಿಯೇ ಇಲ್ಲ.

ಅದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ, ಐದು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆರ್‌ಬಿಐ ಬಾಂಡ್‌ಗಳಲ್ಲಿನ 3,100 ವ್ಯವಹಾರಗಳಲ್ಲಿ ಸುಮಾರು 3.52 ಲಕ್ಷ ಕೋಟಿ ರೂ., ಅಂದರೆ ಶೇ.10ರಷ್ಟು ವ್ಯವಹಾರಗಳು ಪಾನ್ ಸಂಖ್ಯೆ ನಮೂದಿಸದೆಯೇ ನಡೆದಿರುವುದು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ