ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಿಟಕಿ ದೋಷ; ಟೊಯೋಟಾದ ಲಕ್ಷಗಟ್ಟಲೆ ಕಾರುಗಳು ವಾಪಸ್ (China | Toyota | car | Vehicle)
 
ಟೊಯೋಟಾ ಮೋಟಾರ್ ಕಾರ್ಪೊರೇಷನ್ ಚೀನಾದಲ್ಲಿ ತಯಾರಿಸಿದ ವಾಹನಗಳ ಕಿಟಕಿ ನಿಯಂತ್ರಣದ ವಿದ್ಯುದೀಕರಣ ವ್ಯವಸ್ಥೆಯಲ್ಲಿ ದೋಷಗಳು ಕಂಡು ಬಂದಿರುವುದರಿಂದ ಸುಮಾರು 690,000 ಕಾರುಗಳನ್ನು ವಾಪಸು ಪಡೆದುಕೊಳ್ಳಲಿದೆ ಎಂದು ಚೀನಾದ ಗುಣಮಟ್ಟ ಪರಿಶೀಲನಾ ಸಮಿತಿ ತಿಳಿಸಿದೆ.
Toyota Logo
PR


ಟೊಯೋಟಾ ವಾಪಸು ಪಡೆಯಲಿರುವ ವಾಹನಗಳಲ್ಲಿ ಗುವಾಂಗ್ಜೂ ಅಟೋಮೊಬೈಲ್ ಸಮೂಹದ ಜತೆ ಸೇರಿ ಜಂಟಿಯಾಗಿ ತಯಾರಿಸಿದ್ದ ಕಾಮ್ರಿ ಮತ್ತು ಯಾರಿಸ್ ಎಂಬ 407,503 ಪ್ರಯಾಣಿಕ ಕಾರುಗಳು ಕೂಡ ಸೇರಿವೆ.

ಇದೇ ಕಾರಣಕ್ಕಾಗಿ ತಿಯಾಂಜಿನ್ ಫಾ ಟೊಯೊಟಾದ 280,811 ವಿಯೋಸ್ ಮತ್ತು ಕೊರೊಲಾಸ್ ಕಾರುಗಳನ್ನು ಕೂಡ ಗ್ರಾಹಕರಿಂದ ಮರಳಿ ಪಡೆಯಲಾಗುತ್ತದೆ ಎಂದು ಗುಣಮಟ್ಟ ಪರಿಶೀಲನಾ ಆಡಳಿತ ತಿಳಿಸಿದೆ.

ಈ ಸಂಬಂಧದ ಆಗಸ್ಟ್ 18ರ ದಿನಾಂಕವನ್ನು ಹೊಂದಿರು ನೊಟೀಸನ್ನು ಆಡಳಿತವು ಭಾನುವಾರದಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಈ ಬಗ್ಗೆ ಸೋಮವಾರ ಟೊಯೋಟಾದ ಜಪಾನ್ ಪ್ರಧಾನ ಕಚೇರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದಿದೆ.

ವಿಪರೀತ ಕೀಲೆಣ್ಣೆಯ ಕಾರಣದಿಂದ ಕಾರುಗಳ ಕಿಟಕಿಯ ಗುಂಡಿಗಳು ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಬೆಂಕಿ ಹತ್ತಿಕೊಳ್ಳುವ ಅಥವಾ ಇತರ ಅಪಾಯಗಳು ಸಂಭವಿಸುವ ಕಾರಣಗಳಿವೆ ಎಂದು ಗುಣಮಟ್ಟ ಪರಿಶೀಲನಾ ತಂಡವು ನೊಟೀಸ್‌ನಲ್ಲಿ ತಿಳಿಸಿದೆ.

ಬಾಧಿತ ಕಾರು ಮಾಲಕರು ಮಂಗಳವಾರದಿಂದ ಟೊಯೋಟಾ ಕಂಪನಿಯನ್ನು ಸಂಪರ್ಕಿಸಿ ತಮ್ಮ ಕಾರುಗಳ ಕಿಟಕಿಯನ್ನು ಉಚಿತವಾಗಿ ಅದಲು-ಬದಲು ಮಾಡಿಕೊಳ್ಳಬಹುದಾಗಿದೆ ಎಂದು ನೊಟೀಸ್ ವಿವರಣೆ ನೀಡಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ