ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನೌಕರರಿಗೆ ನಿಗದಿಯಂತೆ ವೇತನ ಪಾವತಿ: ಏರ್ ಇಂಡಿಯಾ (Employee | Air India | UPA | Praful Patel)
 
ತನ್ನ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಿರುವಂತೆಯೇ ಇತ್ತ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾ ಆಡಳಿತ ಮಂಡಳಿ, ತಿಂಗಳ ವೇತನ ಮತ್ತು ಕೂಲಿಯನ್ನು ವಿಳಂಬ ಮಾಡುವುದಿಲ್ಲ ಎಂದಿದೆ.

ಏರ್ ಇಂಡಿಯಾ ಉದ್ಯೋಗಿಗಳಿಗೆ ನಿಗದಿಯಂತೆ ಪ್ರತೀ ತಿಂಗಳ ಕೊನೆಯ ದಿನದಂದು ನೀಡುವಂತೆ ಆಗಸ್ಟ್ ತಿಂಗಳ ಸಂಬಳವನ್ನೂ ನೀಡಲಾಗುತ್ತದೆ, ಇದರಲ್ಲಿ ಯಾವುದೇ ವಿಳಂಬ ನೀತಿಯನ್ನು ಅನುಸರಿಸಲಾಗುವುದಿಲ್ಲ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಉತ್ಪಾದನಾ ಸಂಬಂಧಿ ಪ್ರೋತ್ಸಾಹ ಧನ (ಪಿಎಲ್‌ಐ), ಹಾರಾಟ ಮತ್ತು ಇತರ ಭತ್ಯೆಗಳ ಕುರಿತು ನೌಕರರ ಒಕ್ಕೂಟಗಳು ಆಡಳಿತ ಮಂಡಳಿಯ ಜತೆ ನವದೆಹಲಿಯಲ್ಲಿ ಮಾತುಕತೆ ಆರಂಭಿಸುವ ಹೊತ್ತಿಗೆ ಈ ಪ್ರಕಟಣೆಯನ್ನು ವಿಮಾನಯಾನ ಸಂಸ್ಥೆ ಹೊರಡಿಸಿದೆ.

ವೇತನ ವಿಳಂಬ ಮತ್ತು ಇತರ ಕೆಲವು ವಿಚಾರಗಳನ್ನು ಮುಂದಿಟ್ಟು ಇಂದು ಬೆಳಿಗ್ಗೆ ನೌಕರರ ಹಲವಾರು ಒಕ್ಕೂಟಗಳು ಮೂರು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದವು.

ಸಂಘಟನೆಗಳ ಮುಖಂಡರನ್ನೊಳಗೂಡಿದ ನೌಕರರು ಇಂದು ಬೆಳಿಗ್ಗೆ ಘೋಷಣೆಗಳನ್ನು ಕೂಗುತ್ತಾ, ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ನೌಕರರ ವೇತನದಲ್ಲಿ ಶೇ.50ರಷ್ಟನ್ನು ಕಡಿತ ಮಾಡಲಾಗುತ್ತದೆ ಎಂಬ ಹಿನ್ನಲೆಯಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಆದರೆ ವೇತನ ಪಡೆಯುವುದು ಕೆಲಸ ಮಾಡಿದ ನಮ್ಮ ಹಕ್ಕು ಎಂದು ನೌಕರರ ಒಕ್ಕೂಟಗಳು ಪ್ರತಿಪಾದಿಸಿದ್ದು, ಬೇಡಿಕೆಗಳು ಈಡೇರದಿದ್ದರೆ ಆಗಸ್ಟ್ 31ರಂದು ಮುಷ್ಕರ ಹೂಡಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ