ನೋಕಿಯಾ ಭಾರತದಲ್ಲಿ ಮತ್ತೊಂದು ಮ್ಯೂಸಿಕ್ ಫೋನ್ ಪರಿಚಯಿಸಲು ವೇದಿಕೆ ಸಿದ್ಧಪಡಿಸುತ್ತಿದೆ. ನೋಕಿಯಾ 5530 ಎಕ್ಸ್‌ಪ್ರೆಸ್ ಮ್ಯೂಸಿಕ್ ಎಂಬ ಹೆಸರಿನ ಈ ಮೊಬೈಲ್ ಭಾರತದ ಮಾರುಕಟ್ಟೆಗೆ ಬಂದ ಈ ಸಂಸ್ಥೆಯ ಎರಡನೇ ಎಕ್ಸ್‌ಪ್ರೆಸ್ ಮ್ಯೂಸಿಕ್ ಮಾಡೆಲ್ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿದೆ.
ನೋಕಿಯಾ 5530 ಎಕ್ಸ್‌ಪ್ರೆಸ್ ಮ್ಯೂಸಿಕ್ 360X640 ಪಿಕ್ಸೆಲ್ ರೆಸೊಲ್ಯೂಷನ್‌ನೊಂದಿಗೆ 2.9 ಇಂಚಿನ ಟಿಎಫ್‌ಟಿ ಟಚ್ ಸ್ಕ್ರೀನ್ ಸೌಲಭ್ಯ ಹೊಂದಿದೆ. ತನ್ನಿಂತಾನೇ ಇದರ ಸೆನ್ಸಾರ್ ಆಫ್ ಆಗುವುದು ಇದರಲ್ಲಿನ ವಿಶೇಷ. ಈ ಮೊಬೈಲ್‌ನ ತೂಕ ಕೇವಲ 107 ಗ್ರಾಂಗಳು. 4.09, 1.09, 0.51 ಇಂಚು ಇದರ ಅಳತೆ.
ಎಲ್‌ಇಡಿ ಫ್ಲ್ಯಾಶ್ ಮತ್ತು ಅಟೋ ಫೋಕಸ್ ಜತೆ 3.2 ಮೆಗಾ ಪಿಕ್ಸೆಲ್ ಕ್ಯಾಮರಾ ಮತ್ತೊಂದು ಅಚ್ಚರಿ. ಅಟೋ ಫೋಕಸ್‌ನೊಂದಿಗೆ 4ಎಕ್ಸ್ ಝೂಮ್ ಸೌಲಭ್ಯವಿದೆ.
ಅಲ್ಲದೆ ಈ ಫೋನ್‌ನಲ್ಲಿ ವೀಡಿಯೋ ಮತ್ತು ಇಮೇಜ್ ಎಡಿಟರ್ ವ್ಯವಸ್ಥೆಯಿದೆ. ಪ್ರತೀ ಸೆಕುಂಡಿಗೆ 30 ಫ್ರೇಮ್‌ಗಳೊಂದಿಗೆ ವೀಡಿಯೋ ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿರುವ 5530 ಎಕ್ಸ್‌ಪ್ರೆಸ್ ಮ್ಯೂಸಿಕ್ ಫೋನ್ ವೈ-ಫೈ ಮತ್ತು ಬ್ಲೂಟೂತ್ ಹೊಂದಿದೆ.
ಎಂಪಿ3, ಎಸ್‌ಪಿಮಿಡಿ, ಎಎಸಿ+, ಇಎಎಸಿ, ಡಬ್ಲ್ಯೂಎಂಎ ಮುಂತಾದ ಮೀಡಿಯಾ ಫಾರ್ಮಾಟ್‌ಗಳಿಗೆ ಇದು ಸಹಕರಿಸುತ್ತದೆ. 3ಡಿ ಸರೌಂಡ್ ವ್ಯವಸ್ಥೆ ಹೊಂದಿದ್ದು, ನೋಕಿಯಾ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಭರವಸೆ ನೀಡಿದೆ. ಒಮ್ಮೆ ಚಾರ್ಚ್ ಮಾಡಿದರೆ 27 ಗಂಟೆಗಳ ಕಾಲ ಬಳಸಬಹುದು ಎಂದೂ ಹೇಳಲಾಗಿದೆ.
128 ಎಂಬಿ ರ‌್ಯಾಮ್, ಎರ್‌ಎಂ 11 434 ಮೆಘಾ ಹರ್ಟ್ಜ್ ಪ್ರೊಸೆಸರ್, 70 ಎಂಬಿ ಇಂಟರ್ನಲ್ ಮೆಮೊರಿ, 16 ಜಿಬಿ ಮೈಕ್ರೋ ಎಸ್‌ಡಿ ಮೆಮೊರಿ ಸೌಲಭ್ಯವಿದೆ. ನಾಲ್ಕು ಜಿಬಿ ಮೆಮೊರಿ ಕಾರ್ಡ್ ಉಚಿತವಾಗಿ ಮೊಬೈಲ್‌ನೊಂದಿಗೆ ಸಿಗುತ್ತದೆ.
ಮೂಲಗಳ ಪ್ರಕಾರ ಈ ಮೊಬೈಲ್‌ನ ಅಂದಾಜು ಬೆಲೆ 13,000 ರೂಪಾಯಿಗಳಿಂದ 14,000 ರೂಪಾಯಿಗಳು.