ತ್ವರಿತ ಲಾಭಕ್ಕಾಗಿ ಶೇರು ಮಾರುಕಟ್ಟೆಯತ್ತ ಹೂಡಿಕೆದಾರರು ವಾಲಿದರೂ ವಿದೇಶಿ ಮಾರುಕಟ್ಟೆಗಳಲ್ಲಿನ ದುರ್ಬಲ ನಡೆಗಳಿಂದಾಗಿ ರಾಷ್ಟ್ರ ರಾಜಧಾನಿಯ ಚಿನಿವಾರ ಪೇಟೆಯಲ್ಲಿ ಚಿನ್ನ ದರ ಪ್ರತೀ 10 ಗ್ರಾಂಗಳಲ್ಲಿ 100 ರೂಪಾಯಿ ಕುಸಿತ ಕಂಡದ್ದು, 15,200 ರೂಪಾಯಿಗಳನ್ನು ಮುಟ್ಟಿದೆ.
ಉತ್ಕೃಷ್ಟ ಚಿನ್ನ ಮತ್ತು ಆಭರಣ ಬೆಲೆ ತಲಾ 100 ರೂಪಾಯಿಗಳಂತೆ ಕುಸಿತ ಕಂಡಿದ್ದು, ಕ್ರಮವಾಗಿ 15,200 ಮತ್ತು 15,050 ರೂಪಾಯಿಗಳನ್ನು ಪ್ರತೀ 10 ಗ್ರಾಂಗಳಿಗೆ ದಾಖಲಿಸಿದೆ.
ಆದರೆ ಪವನ್ ಚಿನ್ನ ಯಾವುದೇ ಬದಲಾವಣೆ ಕಂಡಿಲ್ಲ. ಈ ಹಿಂದಿನ ಮಾರುಕಟ್ಟೆ ದರ 12,525 ರೂಪಾಯಿಗಳನ್ನೇ ಎಂಟು ಗ್ರಾಂಗಳಿಗೆ ಮುಂದುವರಿಸಿದೆ.
ಸಿದ್ಧ ಬೆಳ್ಳಿಯಲ್ಲಿ 200 ರೂಪಾಯಿಗಳ ಭಾರೀ ಹಿಂಜರಿತ ದಾಖಲಾಗಿದ್ದು, ಪ್ರತೀ ಕೇಜಿ ಬೆಲೆ 23,400 ರೂಪಾಯಿಗಳು. ವಾರವನ್ನಾಧರಿಸಿದ ವಿತರಣೆಯಲ್ಲಿ 230 ರೂಪಾಯಿಗಳ ಹಿನ್ನಡೆಯುಂಟಾಗಿದೆ. ಇಲ್ಲಿ ಪ್ರತೀ ಕೇಜಿ ಬೆಳ್ಳಿ ದರ 23,080 ರೂಪಾಯಿಗಳು.
ಬೆಳ್ಳಿ ನಾಣ್ಯಗಳು ಈ ಹಿಂದಿನ ದರದಲ್ಲೇ ಮುಂದುವರಿದಿವೆ. ಪ್ರತೀ 100 ಬೆಳ್ಳಿ ನಾಣ್ಯಗಳ ಖರೀದಿಗೆ 30,000 ಹಾಗೂ ಮಾರಾಟಕ್ಕೆ 30,100 ರೂಪಾಯಿಗಳಲ್ಲೇ ಇದು ಕೂಡ ಮಾರುಕಟ್ಟೆ ವ್ಯವಹಾರ ನಡೆಸಿದೆ.
ಇಲ್ಲಿನ ಶೇರು ಮಾರುಕಟ್ಟೆಗಳಲ್ಲಿನ ಚೇತರಿಕೆ ಮತ್ತು ನ್ಯೂಯಾರ್ಕ್‌ನಲ್ಲಿ ಕಳೆದ ರಾತ್ರಿ ಚಿನ್ನದರ ಕುಸಿತ ಕಂಡಿರುವುದರಿಂದ ಭಾರತದ ಮಾರುಕಟ್ಟೆಗಳಲ್ಲೂ ಚಿನ್ನ ಹಿನ್ನಡೆ ಕಾಣಲು ಕಾರಣವಾಯಿತು ಎಂದು ಉದ್ಯಮ ವಲಯ ಅಭಿಪ್ರಾಯಪಟ್ಟಿದೆ.