ಇಡೀ ಭಾರತದಲ್ಲೇ ನಂ.1 ಅಂತರ್ಜಾಲ ತಾಣ 'ಆರ್ಕುಟ್' ಎಂದು ಹೇಳಿಕೊಂಡಿರುವ ಗೂಗಲ್, ಬೆಂಗಳೂರಿನಲ್ಲಿ 'ಇಂಡಿಯಾ', 'ಒಕ್ಕಲಿಗ ಗೌಡಾಸ್' ಮತ್ತು 'ನರುತೋ' ಎಂಬ ಕಮ್ಯೂನಿಟಿಗಳು ಹೆಚ್ಚು ಜನಪ್ರಿಯವಂತೆ.
ಅಮೆರಿಕಾದಲ್ಲಿ ಅಷ್ಟೇನೂ ಪ್ರಸಿದ್ಧವಾಗದ ಹೊರತಾಗಿಯೂ ಭಾರತದಲ್ಲಿ ಇದೇ ಅಗ್ರ ತಾಣ. ಇಲ್ಲಿ ಫೇಸ್‌ಬುಕ್, ಮೈಸ್ಪೇಸ್, ಟ್ವಿಟ್ಟರ್, ಬಿಗ್‌ಅಡ್ಡಾ ಇನ್ನಿತರ ಸಾಮಾಜಿಕ ಸಂಪರ್ಕ ತಾಣಗಳಿಗೆ ಆರ್ಕುಟ್‌ನಷ್ಟು ಬೇಡಿಕೆಯಿಲ್ಲ. ಹಾಗಾಗಿ 'ಆರ್ಕುಟ್ ವಿಶ್ವ'ದಲ್ಲಿ ಭಾರತವೇ ನಂ.2 ಸ್ಥಾನದಲ್ಲಿದೆ.
PR
ಗೂಗಲ್ ಮಾಹಿತಿಗಳ ಪ್ರಕಾರ 2009ರ ಮೇಯಲ್ಲಿ ಶೇ.42.83ರಷ್ಟು ಆರ್ಕುಟ್ ಬಳಕೆದಾರರು ಬ್ರೆಜಿಲ್‌ನವರು. ಶೇ.17.51ರಷ್ಟು ಬಳಕೆದಾರರನ್ನು ಹೊಂದುವ ಮೂಲಕ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. ಆರ್ಕುಟ್ ಬಳಸುತ್ತಿರುವವರಲ್ಲಿ ಅಮೆರಿಕನ್ನರು ಕೇವಲ ಶೇ.8.9 ಮಾತ್ರ. ಜಪಾನ್ ಮತ್ತು ಪಾಕಿಸ್ತಾನಗಳು ಕ್ರಮವಾಗಿ ಶೇ.8.8 ಮತ್ತು ಶೇ. 6.9ರ ಪಾಲು ಹೊಂದಿವೆ.
ಯಾವ ನಗರಗಳಲ್ಲಿ ಯಾವ ಕಮ್ಯೂನಿಟಿಗಳು ಪ್ರಸಿದ್ಧ.. ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆರ್ಕುಟ್ ಪ್ರಸಿದ್ಧ. ಇಲ್ಲಿ 'ಸ್ಟೈಲಿಷ್ ಪ್ಯೂಪಲ್' ಮತ್ತು 'ಚಾಕೊಲೇಟ್' ಎಂಬ ಕಮ್ಯುನಿಟಿಗಳು ಅತೀ ಹೆಚ್ಚು ಬಳಕೆದಾರರನ್ನು ಹೊಂದಿವೆ. ಸ್ಟೈಲ್ ಬಗ್ಗೆ ಮಾತಿಗಿಳಿಯುವ ಸ್ಟೈಲಿಷ್ ಪ್ಯೂಪಲ್ 839,109 ಬಳಕೆದಾರರನ್ನು ಹೊಂದಿದೆ.
ಮುಂಬೈ: ರಾಷ್ಟ್ರದ ಆರ್ಥಿಕ ರಾಜಧಾನಿಯಲ್ಲಿ ಮರಾಠಿಗರದ್ದೇ ಪ್ರಾಬಲ್ಯ. 'ಮರಾಠಿ ಗರ್ಲ್ಸ್ ರಾಕ್', 'ಇಂಡಿಯಾ' ಮತ್ತು 'ಮರಾಠಿ' ಎಂಬ ಕಮ್ಯುನಿಟಿಗಳು ಇಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿಕೊಂಡಿವೆ. 'ಇಂಡಿಯಾ' ಕಮ್ಯುನಿಟಿ ಒಟ್ಟಾರೆ 894,801 ಬಳಕೆದಾರರನ್ನು ಹೊಂದಿದೆ.
ಬೆಂಗಳೂರು: ಹೇಳಿಕೇಳಿ ಸಿಲಿಕಾನ್ ಸಿಟಿಯೆಂದು ಅಮೆರಿಕಾದಲ್ಲೂ ಜನಪ್ರಿಯ. ದೇಶಭಕ್ತಿಗೆ ಕನ್ನಡಿಗರ ಕೊಡುಗೆ ಮಹತ್ತರವಾದದ್ದು. ಉಳಿದ ವಿಚಾರಗಳಲ್ಲೂ ಅಷ್ಟೇ. ಇಲ್ಲಿ 'ಇಂಡಿಯಾ', 'ಒಕ್ಕಲಿಗ ಗೌಡಾಸ್', ಮತ್ತು 'ನರುತೋ' ಎಂಬ ಮೂರು ಕಮ್ಯುನಿಟಿಗಳು ಅಗ್ರ ಸ್ಥಾನವನ್ನು ಪಡೆದುಕೊಂಡಿವೆ.
ಉಳಿದಂತೆ ಬೆಂಗಾಲೀಸ್, ಮಲಯಾಳೀಸ್, ಕನ್ನಡಿಗಾಸ್, ತಮಿಳಿಯನ್ಸ್, ಬೆಂಗಳೂರು ಮುಂತಾದ ಕಮ್ಯುನಿಟಿಗಳು ಕೂಡ ಸದಾ ಕಾರ್ಯಪ್ರವೃತ್ತವಾಗಿರುತ್ತವೆ.
ಹೈದರಾಬಾದ್: ಮಾಹಿತಿ ತಂತ್ರಜ್ಞಾನಕ್ಕೆ ಹೆಸರುವಾಸಿಯಾದ ಈ ನಗರವು ಟಾಲಿವುಡ್‌ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದೆ. ಈ ನಿಟ್ಟಿನಲ್ಲಿ ಇತರ ರಾಜ್ಯಗಳಲ್ಲಿನ ಸಿನಿಮಾಗಳನ್ನೂ ಇದು ಮೀರಿ ನಿಂತಿದೆ.
'ಪವರ್‌ಸ್ಟಾರ್ ಪವನ್ ಕಲ್ಯಾಣ್', 'ತೆಲುಗು ಮೂವೀ ವರ್ಲ್ಡ್' ಎಂಬ ಎರಡು ಕಮ್ಯುನಿಟಿಗಳೇ ಹೈದರಾಬಾದ್ 'ನೆಟಿ'ಜನ್‌ಗಳನ್ನು ಆಳುತ್ತಿವೆ.