ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಪ್ರಸ್ತಾಪವಿಲ್ಲ: ಸರಕಾರ (Petrol | Diesel | India | Petroleum)
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯೇರಿಕೆಯಾಗಿರುವ ಹೊರತಾಗಿಯೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ದರ ಏರಿಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ಆರ್.ಎಸ್. ಪಾಂಡೆ ತಿಳಿಸಿದ್ದಾರೆ.

ಪ್ರಸಕ್ತ ಹೊಂದಿರುವ ದರಗಳು ತೃಪ್ತಿದಾಯಕವಲ್ಲ. ಆದರೆ ಇಂಧನ ದರ ಏರಿಕೆ ಮಾಡುವ ಬಗ್ಗೆ ನಮ್ಮೆದುರು ಯಾವುದೇ ಪ್ರಸ್ತಾಪಗಳಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತೀಯ ವಾಹನ ತಯಾರಕರ ಸಂಘಟನೆ (ಎಸ್‌ಐಎಎಂ) ಆಯೋಜಿಸಿದ್ದ ಜಾಗತಿಕ ಜಲಜನಕ ತಂತ್ರಜ್ಞಾನಗಳ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು ಸ್ಪಷ್ಟಪಡಿಸಿದರು.

ಪ್ರಸಕ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 10 ತಿಂಗಳಲ್ಲೇ ಗರಿಷ್ಠವೆನ್ನಲಾಗುವ ಪ್ರತೀ ಬ್ಯಾರೆಲ್‌ಗೆ 75 ಅಮೆರಿಕನ್ ಡಾಲರುಗಳನ್ನು ತಲುಪಿದೆ. ಇದರಿಂದಾಗಿ ಒತ್ತಡಕ್ಕೊಳಗಾಗಿರುವ ದೇಶದ ತೈಲ ಪೂರೈಕೆದಾರ ಸಂಸ್ಥೆಗಳು, ಸರಕಾರ ಮತ್ತೆ ಪೆಟ್ರೋಲಿಯಂ ದರ ಏರಿಸಬೇಕು ಎಂದು ನಿರೀಕ್ಷಿಸುತ್ತಿವೆ.

ಕಳೆದ ತಿಂಗಳು ಸರಕಾರವು ಪ್ರತೀ ಲೀಟರ್ ಪೆಟ್ರೋಲ್ ಬೆಲೆ 4 ರೂಪಾಯಿ ಹಾಗೂ ಡೀಸೆಲ್ ಬೆಲೆ 2 ರೂಪಾಯಿಗಳಂತೆ ಏರಿಸಲು ದೇಶದ ಪೆಟ್ರೋಲಿಯಂ ಪೂರೈಕೆದಾರ ಸಂಸ್ಥೆಗಳಿಗೆ ಅನುಮತಿ ನೀಡಿತ್ತು. ಆದರೆ ಈ ನಿರ್ಧಾರವನ್ನು ವಿರೋಧ ಪಕ್ಷಗಳು ಹಾಗೂ ಗ್ರಾಹಕರು ಭಾರೀ ವಿರೋಧಿಸಿದ್ದರು.

ಒಂದು ಕಡೆ ದೇಶವು ಬರ ಸ್ಥಿತಿಯನ್ನು ಎದುರಿಸುತ್ತಿದ್ದು, ಇದರಿಂದಾಗಿ ಆಹಾರ ಪದಾರ್ಥಗಳು ಸೇರಿದಂತೆ ದೈನಂದಿನ ವಸ್ತುಗಳು ದುಬಾರಿಯಾಗತೊಡಗಿವೆ. ಜತೆಗೆ ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಾದಲ್ಲಿ ಜನಸಾಮಾನ್ಯರ ಬದುಕು ದುರ್ಬರವಾಗಬಹುದು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ