ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 300 ನೌಕರರ ನೇಮಕಾತಿಗೆ ಮುಂತಾದ ಸತ್ಯಂ ಬಿಪಿಓ (Satyam | Mahindra Satyam | BPO | India)
 
ಮಹೀಂದ್ರಾ ಸತ್ಯಂ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸುವ ಚಿಂತನೆಯಲ್ಲಿದ್ದರೆ, ಅತ್ತ ಅದರ ಬಿಪಿಓ (ಹೊರಗುತ್ತಿಗೆ ವ್ಯವಹಾರ) ವಿಭಾಗವು 300 ನೌಕರರನ್ನು ಮುಂದಿನ ತಿಂಗಳು ನೇಮಕಗೊಳಿಸುವ ನಿರ್ಧಾರ ಕೈಗೊಂಡಿದೆ.

ದೇಶೀಯ ವಲಯದ ಸಂಸ್ಥೆಯೊಂದರಿಂದ ಸತ್ಯಂ ಬಿಪಿಓ ಇತ್ತೀಚೆಗಷ್ಟೇ ಒಂದು ಬೃಹತ್ ಒಪ್ಪಂದವನ್ನು ಪಡೆದುಕೊಂಡಿದ್ದರಿಂದ ಹೆಚ್ಚಿನ ಉದ್ಯೋಗಿಗಳ ನೇಮಕಕ್ಕೆ ಕಂಪನಿ ಮುಂದಾಗಿದೆ.

ನಮ್ಮ ಗ್ರಾಹಕರನ್ನು ಬೆಂಬಲಿಸುವ ಸಲುವಾಗಿ ನಾವು ಕಳೆದ ತಿಂಗಳು 700 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಮುಂದಿನ ತಿಂಗಳಾಂತ್ಯದೊಳಗೆ ಹೆಚ್ಚುವರಿ 300 ನೌಕರರನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಮಹೀಂದ್ರಾ ಸತ್ಯಂ ಬಿಪಿಓ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ರಂಗಿನೇಣಿ ತಿಳಿಸಿದ್ದಾರೆ.

ಅದೇ ಹೊತ್ತಿಗೆ ತನಗೆ ಸಿಕ್ಕಿರುವ ಹೊಸ ಗ್ರಾಹಕ ಅಥವಾ ಸಂಸ್ಥೆ ಯಾವುದು ಮತ್ತು ಒಪ್ಪಂದದ ಮೊತ್ತವೆಷ್ಟು ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ಸತ್ಯಂ ಗೆದ್ದಿರುವುದು ದೂರವಾಣಿ ಕ್ಷೇತ್ರದ ಬಿಡ್.

ಮುಂದಿನ ತಿಂಗಳಿನಲ್ಲಿ ನಡೆಯಲಿರುವ ನೌಕರರ ನೇಮಕಾತಿಯ ನಂತರ ಬಿಪಿಓ ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆ 2,900 ಆಗಲಿದೆ. ಪ್ರಸಕ್ತ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಮಾತೃಸಂಸ್ಥೆ ಮಹೀಂದ್ರಾ ಸತ್ಯಂ ಗಣನೀಯ ಹಾದಿಯಲ್ಲದ್ದು, ದೇಶೀಯ ವಲಯದ ಬೃಹತ್ ಬಿಡ್ ಗೆದ್ದುಕೊಂಡ ಮೊದಲ ಸಂಸ್ಥೆ ಮಹೀಂದ್ರಾ ಸತ್ಯಂ ಬಿಪಿಓ ಎಂಬ ಖ್ಯಾತಿಗೆ ಇದೀಗ ಪಾತ್ರವಾಗಿದೆ.

ಬಿಪಿಓ ಸಂಸ್ಥೆಯು ದೇಶೀಯ ಮಾರುಕಟ್ಟೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಿದ್ದು, ಅದರತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ ಎಂದು ರಂಗಿನೇಣಿ ತಿಳಿಸಿದ್ದಾರೆ.

ಮಹೀಂದ್ರಾ ಸತ್ಯಂ ಬಿಪಿಓ ಪ್ರಸಕ್ತ ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಪುಣೆಗಳಲ್ಲಿ ವಿತರಣಾ ಕೇಂದ್ರಗಳನ್ನು ಹೊಂದಿದೆ. ಇದುವರೆಗೆ ಜಾಗತಿಕ ವಿತರಣೆಯ ಯಾವುದೇ ಕೇಂದ್ರವನ್ನು ಸಂಸ್ಥೆಯು ತೆರೆದಿಲ್ಲ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ