ರಫ್ತುದಾರರಿಗೆ ತೆರಿಗೆ ವಾಪಸಾತಿ, ತೆರಿಗೆ ಅವಧಿ ವಿಸ್ತರಣೆ, ಬಂಡವಾಳ ಸರಕು ಆಮದಿನಲ್ಲಿ ಸುಂಕ ಮುಕ್ತತೆ ಸೇರಿದಂತೆ ಉದ್ಯಮಕ್ಕೆ ಸಹಾಯಕವಾಗುವ ಹಲವು ಅಂಶಗಳನ್ನೊಳಗೊಂಡ ನೂತನ ವಿದೇಶ ವ್ಯವಹಾರ ನೀತಿಯಯನ್ನು ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮಾ ಇಂದು ಅನಾವರಣಗೊಳಿಸಿದ್ದಾರೆ.
ಅದರ ಕೆಲವು ಮುಖ್ಯಾಂಶಗಳು ಹೀಗಿವೆ..
- ಡಿಸೆಂಬರ್ 2010ರವರೆಗೆ ತೆರಿಗೆ ಅಧಿಕಾರ ಪಾಸ್‌ಬುಕ್ ಸ್ಕೀಮ್ ವಿಸ್ತರಣೆ.
- ರಫ್ತು ಆಧರಿತ ಘಟಕಗಳ ಉತ್ಕೃಷ್ಟ ನಿರ್ವಹಣಾ ವಿಧಾನ (ಎಸ್‍ಓಪಿ)ಗಳನ್ನು 2011ರ ಮಾರ್ಚ್‌ವರೆಗೆ ವಿಸ್ತರಣೆ.
- 2010-11ರ ಅವಧಿಗೆ 200 ಬಿಲಿಯನ್ ಅಮೆರಿಕನ್ ಡಾಲರ್ ರಫ್ತು ಗುರಿ.
- ಮುಂದಿನ ಎರಡು ವರ್ಷಗಳ ಕಾಲ ಶೇ.15ರ ಪ್ರಗತಿಯ ಗುರಿ. ನಂತರ ಶೇ.25ರ ಗುರಿ.
- ರಫ್ತುದಾರರ ಸಮಸ್ಯೆಗಳಿಗೆ ಸಚಿವಾಲಯದ ಆಂತರಿಕ ಸಮೂಹದಿಂದ ಪರಿಹಾರ.
- ರಫ್ತು ವ್ಯಾಪಾರದ ಅಭಿವೃದ್ಧಿ ಬಂಡವಾಳ ಸರಕುಗಳ ಯೋಜನೆಯ ಜವಾಬ್ದಾರಿ ಸಡಿಲ.
- ಆಭರಣ ತಯಾರಿಕಾ ವಲಯಕ್ಕೆ ತೆರಿಗೆ ಮರುಪಾವತಿ ಯೋಜನೆಗೆ ಅವಕಾಶ.
- ವ್ಯವಹಾರ ವೆಚ್ಚಗಳ ಕಡಿತಕ್ಕೆ ಭತ್ಯೆಗಳ ಅಂಗೀಕಾರ ನೀಡಲು ಶುಲ್ಕವಿಲ್ಲ.
- ವ್ಯವಹಾರ ವೆಚ್ಚಗಳಲ್ಲಿ ಕಡಿತಗೊಳಿಸುವ ಮೂಲಕ ರಫ್ತುದಾರರಿಗೆ ಸಹಾಯ ಮಾಡಲು ನಿರ್ಧಾರ.
- ದೇಶದಲ್ಲಿ ವಿದೇಶಿ ವಜ್ರ ವ್ಯಾಪಾರ ಮಾರುಕಟ್ಟೆಗೆ ಯೋಜನೆ.
- ಕೃಷಿ ಕ್ಷೇತ್ರದ ರಫ್ತಿಗೆ ಏಕ-ಗವಾಕ್ಷಿ ಯೋಜನೆ.
- ಆಮದು ಮಾಡಿಕೊಂಡ ಉಪಯೋಗವಿಲ್ಲದ ಚರ್ಮವನ್ನು ಮರು-ರಫ್ತು ಮಾಡುವಾಗ ಶೇ.50ರಷ್ಟು ತೆರಿಗೆ ವಿನಾಯಿತಿ.
- ಚಹಾದ ಮೇಲಿನ ಕನಿಷ್ಠ ಹೆಚ್ಚುವರಿ ಮೌಲ್ಯ ಶೇ.100ರಿಂದ 50ಕ್ಕೆ ಇಳಿಕೆ.
- ರಫ್ತು ಘಟಕಗಳಿಗೆ ಶೇ.90ರಷ್ಟು ಸರಕುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ.
- ದೇಶದ ಬ್ಯಾಂಕುಗಳು ಡಾಲರ್ ರೂಪದಲ್ಲಿ ಸಾಲ ನೀಡುವಂತೆ ನಿಯಮ.
- ಮಾರುಕಟ್ಟೆ ಯೋಜನೆಯತ್ತ ಗಮನ ಹೆಚ್ಚಿಸಲು 26 ಹೊಸ ಮಾರುಕಟ್ಟೆಗಳ ಸೇರ್ಪಡೆ.
- ಉತ್ಕೃಷ್ಟ ನಿರ್ವಹಣಾ ವಿಧಾನದ ಅಡಿಯಲ್ಲಿ ಮಾರುಕಟ್ಟೆಯತ್ತ ಪ್ರಭಾವ ಬೀರಲು ಯೋಜನೆಯನ್ನು ಶೇ.2.5ರಿಂದ 3ಕ್ಕೆ ಏರಿಕೆ.
- ರಫ್ತುದಾರರಿಗೆ ನೀಡಲಾಗುವ ತೆರಿಗೆ-ಮುಕ್ತ ವಸ್ತುಗಳ ನಮೂನೆಗಳ ಸಂಖ್ಯೆ 15ರಿಂದ 50ಕ್ಕೆ ಏರಿಕೆ.
- ಉದ್ಯಮ ಪ್ರಮಾಣ ಪರಿಹಾರಕ್ಕಾಗಿ ನೂತನ ನಿರ್ದೇಶನಾಲಯದ ಸ್ಥಾಪನೆ.