ದುರ್ಬಲ ಅಮೆರಿಕನ್ ಡಾಲರ್ ಮತ್ತು ವಾಲ್ ಸ್ಟ್ರೀಟ್‌ನ ಪ್ರಬಲ ವ್ಯವಹಾರವನ್ನು ರಾತೋರಾತ್ರಿ ಬೆನ್ನು ಹತ್ತಿದ ತೈಲ ಮಾರುಕಟ್ಟೆಯು ಏಷಿಯನ್ ವ್ಯವಹಾರದಲ್ಲಿ ಏರಿಕೆ ದಾಖಲಿಸಿದ್ದು, ಪ್ರತೀ ಬ್ಯಾರೆಲ್ ಕಚ್ಚಾ ತೈಲಕ್ಕೆ 72 ಡಾಲರುಗಳಲ್ಲಿ ವ್ಯವಹರಿಸಿದೆ.
ಅಕ್ಟೋಬರ್ ವಿತರಣೆಗಾಗಿನ ನ್ಯೂಯಾರ್ಕ್ ಪ್ರಮುಖ ಒಪ್ಪಂದ ಸಾದಾ ಕಚ್ಚಾ ತೈಲದಲ್ಲಿ 13 ಸೆಂಟ್ಸ್‌ಗಳ ಹೆಚ್ಚಳವಾಗಿದ್ದು, ಪ್ರತೀ ಬ್ಯಾರೆಲ್‌ಗೆ 72.62 ಡಾಲರುಗಳಲ್ಲಿ ವ್ಯವಹಾರ ಕುದುರಿಸಿತು.
ಆದರೆ ಅಕ್ಟೋಬರ್‌ಗಾಗಿನ ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ವಿತರಣೆಯಲ್ಲಿ ಬದಲಾವಣೆಯಾಗದೆ 72.51 ಡಾಲರುಗಳಲ್ಲೇ ಮುಂದುವರಿಯಿತು.
ಅಮೆರಿಕಾದ ಶೇರು ಮಾರುಕಟ್ಟೆಯಲ್ಲಿನ ಪ್ರಗತಿಯ ಲಾಭವನ್ನು ತೈಲ ಮಾರುಕಟ್ಟೆ ಪಡೆದುಕೊಂಡಿದೆ ಎಂದು ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
ಕಳೆದ 28 ತಿಂಗಳಲ್ಲೇ ಅತ್ಯಧಿಕ ಹೆಚ್ಚಳ ದಾಖಲಿಸಿರುವ ಬ್ಲೂ-ಚಿಪ್ ಡೋ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ 37.11 ಅಂಕಗಳ (ಶೇ.0.39) ಏರಿಕೆ ಕಂಡು 9,580.63 ಅಂಕಗಳಿಗೆ ಏರಿಕೆಯಾಗುವ ಮೂಲಕ ಸತತ ಎಂಟನೇ ಬಾರಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿತ್ತು.
ಅದೇ ರೀತಿ ಟೆಕ್-ಹೆವಿ ನಾಸ್ದಾಕ್ 3.30 ಅಂಕಗಳ (ಶೇ.0.16) ಹೆಚ್ಚಳದೊಂದಿಗೆ 2,027.73 ಅಂಕಗಳನ್ನು ದಾಖಲಿಸಿದೆ.
ಇವಿಷ್ಟೇ ಅಲ್ಲದೆ ದುರ್ಬಲಗೊಂಡ ಡಾಲರುಗಳಿಂದಾಗಿಯೂ ತೈಲ ಬೆಲೆ ಮೇಲಕ್ಕೇರಲು ಸಾಧ್ಯವಾಯಿತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಶೇರು ಮಾರುಕಟ್ಟೆಯ ಚೇತರಿಕೆಯ ಹೊರತಾಗಿಯೂ, ಇತರೆಡೆಗಳಿಂದ ಕಚ್ಚಾ ತೈಲ ಮಾರುಕಟ್ಟೆ ಬೆಂಬಲವನ್ನು ಪಡೆದುಕೊಂಡಿತು. ಅದರಲ್ಲಿ ಹೆಚ್ಚಿನ ಬಲ ಬಂದದ್ದು ಅಮೆರಿಕನ್ ಡಾಲರ್ ದುರ್ಬಲವಾದ ಕಡೆಯಿಂದ ಎಂದು ವೆಬ್‌ಸೈಟ್‌ವೊಂದರ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.